
ಉದಯವಾಹಿನಿ, ಆನೇಕಲ್ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನನ್ನ ಅವದಿಯಲ್ಲಿ ಆದ ಅಭಿವೃದ್ದಿ ಬಗ್ಗೆ ಚರ್ಚೆ ಮಾಡಲು ನಾನು ಸಿದ್ದವಿದ್ದೇನೆ ಬಿಜೆಪಿಯವರು ಚರ್ಚೆಗೆ ಬನ್ನಿ ಎಂದು ಸಂಸದ ಡಿ.ಕೆ. ಸುರೇಶ್ ರವರು ಸವಾಲೆಸದರು.
ಅವರು ಇಂಡ್ಲವಾಡಿ ಕ್ರಾಸ್ ಬಳಿಯಿರುವ ಆಡಂಬರ ಎಂಬ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಬಾಗವಹಿಸಿ ಮಾತನಾಡಿದರು.
ನಾನು ಸಂಸದನಾದ ಮೇಲೆ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿದ್ದೇನೆ, ಹಳ್ಳಿಗೊಂದು ಶುದ್ದ ಕುಡಿಯುವ ನೀರಿನ ಘಟಕ, ಕಾವೇರಿ ನೀರು ಪೂರೈಕೆ. ರಸ್ತೆಗಳ ಅಭಿವೃದ್ದಿ ಸೇರಿದಂತೆ ಮೂಲ ಭೂತ ಸೌಕರ್‍ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಎಂದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಹಲವರು ಸಂಸದರಾಗಿ ಕೆಲಸ ನಿರ್ವಹಿಸಿದ್ದಾರೆ ನಾನು ಕೂಡ ಕಳೆದ ೧೫ ವರ್ಷಗಳಿಂದ ಸಂಸದನಾಗಿ ಕಾರ್ಯನಿರ್ವಹಿಸಿದ್ದೇನೆ ಯಾರ ಕಾಲದಲ್ಲಿ ಎಷ್ಠು ಅಭಿವೃದ್ದಿಯಾಗಿದೆ ಎಂಬುದನ್ನು ನೋಡಿ ಆಮೇಲೆ ನನ್ನ ಮೇಲೆ ಆರೋಪ ಮಾಡಿ ಎಂದರು. ಕ್ಷೇತ್ರದಲ್ಲಿ ನಾವು ಮತದಾರರಿಗೆ ಕುಕ್ಕರ್ ಕೊಟ್ಟಿಲ್ಲ ಆಮಿಷಗಳು ಒಡ್ಡಿಲ್ಲ, ಬೇಕಿದ್ದರೆ ತನಿಖೆಯಾಗಲಿ ತನಿಖೆಗೆ ನಾನು ಸಿದ್ದ ಎಂದು ಹೇಳಿದರು.
ಜೆಡಿಎಸ್ ನ ಕೆ.ಪಿ.ರಾಜು ಮತ್ತು ಅವರ ತಂಡ ಸಂಸದ ಡಿ.ಕೆ. ಸುರೇಶ್ ಹಾಗೂ ಶಾಸಕ ಬಿ.ಶಿವಣ್ಣರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಸಭೆಯಲ್ಲಿ ಆನೇಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಹಾಗಡೆ ಹರೀಶ್ ಗೌಡ, ಅತ್ತಿಬೆಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಘುಪತಿರೆಡ್ಡಿ, ಹೆಬ್ಬಗೋಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಣ್ಣ. ಸರ್ಜಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಬಾಬು ಮತ್ತು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬಾಗವಹಿಸಿದ್ದರು.
