ಉದಯವಾಹಿನಿ, ಕೂಡ್ಲಿಗಿ : ಗೂಡ್ಸ್ ವಾಹನವೊಂದರಲ್ಲಿ 20ಲಕ್ಷರೂ ಹಣ ವಿದ್ದು ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ತೆರೆಯಲಾಗಿರುವ ಕೂಡ್ಲಿಗಿ ತಾಲೂಕು ಗಡಿಭಾಗವಾದ ಸಿದ್ದಾಪುರ ಚೆಕ್ ಪೋಸ್ಟ್ ನಲ್ಲಿ ನೇಮಕವಾಗಿದ್ದ ಕರ್ತವ್ಯ ನಿರತ ಸಿಬ್ಬಂದಿ ವಾಹನ ತಪಾಸಣೆ ಮಾಡುವ ವೇಳೆ ಹಣ ಸಿಕ್ಕಿದ್ದು ತಕ್ಷಣ ಅಧಿಕಾರಿಗಳ ಗಮನಕ್ಕೆ ತರಲಾಗಿ ತಕ್ಷಣ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಘಟನೆ ಇಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಸಿದ್ದಾಪುರ ಚೆಕ್ ಪೋಸ್ಟ್ ಬಳಿ ಜರುಗಿದೆ
ರಾಂಪುರ ಕಡೆಯಿಂದ ಗುಡೇಕೋಟೆ ಕಡೆ ಬರುವ ಗೂಡ್ಸ್ ವಾಹನವೊಂದರಲ್ಲಿ 20ಲಕ್ಷ ರೂ ಹಣ ತೆಗೆದುಕೊಂಡು ಬರುವಾಗ ಸಿದ್ದಾಪುರ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತ ಸಿಬ್ಬಂದಿ ತಪಾಸಣೆ ಮಾಡಲಾಗಿ ಅದರಲ್ಲಿದ್ದ 20ಲಕ್ಷ ರೂ ಕುರಿತಂತೆ ಸರಿಯಾದ ಮಾಹಿತಿ ನೀಡದ ಕಾರಣ ವಾಹನವನ್ನು ಗುಡೇಕೋಟೆ ಠಾಣೆಗೆ ಕರೆತಂದು ಕೂಡ್ಲಿಗಿ ಡಿವೈಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ ಹಾಗೂ ಪಿಎಸ್ಐ ಅರುಣ್ ಕುಮಾರ ರಾಥೋಡ್ ಪರಿಶೀಲನೆ ನಡೆಸಲಾಗಿ ಅದರಲ್ಲಿದ್ದ ಹಣ ಕುರಿತಂತೆ ಸರಿಯಾದ ಮಾಹಿತಿ ಇಲ್ಲವಾಗಿ ಅಲ್ಲದೆ ಹಣ ತೆಗೆದುಕೊಂಡು ಹೋಗುವಾಗ ಸೆಕ್ಯೂರಿಟಿ ಇರಬೇಕಿದ್ದು ಅವರಿದ್ದರು ಅವರ ಬಳಿ ಗನ್ ಇಲ್ಲದೆ ಇರುವುದು ಕಂಡ ಕೂಡ್ಲಿಗಿ ಡಿವೈ ಎಸ್ ಪಿ ಅನುಮಾನ ವ್ಯಕ್ತಪಡಿಸಿದ ಅವರು ಪತ್ರಿಕೆಯೊಂದಿಗೆ ಮಾತನಾಡಿ ಐಟಿ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಇನ್ನೂ ಮಾಹಿತಿ ಕಲೆ ಹಾಕುವುದಾಗಿ ಕೂಡ್ಲಿಗಿ ಡಿವೈಎಸ್ ಪಿ ತಿಳಿಸಿದ್ದಾರೆ.
