ಉದಯವಾಹಿನಿ, ಅಫಜಲಪುರ: ಮಹಾರಾಷ್ಟ್ರ ಸರ್ಕಾರದಿಂದ ನೀರು ಪಡೆಯಲು ಕಾನೂನು ಹೋರಾಟ ಮಾಡಬೇಕು ಎಂದು ಪೆÇ್ರ. ಎಂ.ಎಸ್ ಜೋಗದ್ ತಿಳಿಸಿದರು.ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಲ್ಲಿ ಕಳೆದ ಏಳೆಂಟು ದಿನಗಳಿಂದ ಯುವ ಮುಖಂಡ ಶಿವಕುಮಾರ ನಾಟೀಕಾರ ನೇತೃತ್ವದಲ್ಲಿ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಿ.ಎಂ.ಸಿ ನೀರು ಹರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡ ಅಮರಣಾಂತ ಉಪವಾಸ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಮಾತನಾಡಿದ ಅವರು ಭೀಮಾ ನದಿ ಬಚಾವತ್ ಐ ತೀರ್ಪು ಯಥಾವತ್ ಜಾರಿಗೊಳಿಸಿ ನಮ್ಮ ಪಾಲಿನ 15 ಟಿ.ಎಂ.ಸಿ ನೀರು ಬರುವಂತೆ ಸರ್ಕಾರಕ್ಕೆ ಒತ್ತಾಯಿಸಿದ ಅವರು ನೈಸರ್ಗಿಕ ಸಂಪತ್ತು ಹೆಚ್ಚಿಗೆ ಬಳಸುವ ರೈತರು ವಿಶೇಷವಾಗಿ ಕಬ್ಬು ಮತ್ತು ಬಾಳೆ ಬೆಳೆಯುವ ರೈತರು ಇಂತಹ ಹೋರಾಟಗಳಿಗೆ ಮತ್ತು ಕಾನೂನು ಹೋರಾಟ ನಡೆಸಲು ತನು ಮನ ಧನದಿಂದ ಸಹಕರಿಸುವುದು ಸಾಮಾಜಿಕ ಜವಾಬ್ದಾರಿಯಾಗಿದೆ. ಮುಂಬರುವ ದಿನಗಳಲ್ಲಿ ಭೀಮಾ ನದಿಯ ಕುರಿತಾಗಿ ಎಲ್ಲರ ಸಹಕಾರದಿಂದ ಗ್ರಾಮೀಣ ಭಾಗಗಳಲ್ಲಿ ಸಂಚರಿಸಿ, ಜನರಲ್ಲಿ ಜಾಗೃತಿ ಮೂಡಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಬಸಣ್ಣ ಗುಣಾರಿ, ಬಸವರಾಜ ಚಾಂದಕವಟೆ, ಸಿದ್ರಾಮಯ್ಯ ಹಿರೇಮಠ, ಚಿದಾನಂದ ಮಠ, ಸಿದ್ದನಗೌಡ ಮಾಲಿಪಾಟೀಲ ಹವಳಗಾ, ಪ್ರಭಾವತಿ ಮೇತ್ರಿ, ಪ್ರತಿಭಾ ಮಹೀಂದ್ರಕರ, ರಾಜಕುಮಾರ ಉಕ್ಕಲಿ, ಶ್ರೀಕಾಂತ ದಿವಾಣಜಿ, ಸಿದ್ದುಗೌಡ ಪಾಟೀಲ ಅನೇಕರಿದ್ದರು.
