ಉದಯವಾಹಿನಿ,ಕಲಬುರಗಿ: ಉತ್ತರ ಕರ್ನಾಟಕದ ಒಂದು ವಿಶಿಷ್ಟವಾದ ತಿನಿಸು ರೊಟ್ಟಿ ಮುಟಗಿ. ಬಿಸಿ ರೊಟ್ಟಿ, ಅದಕ್ಕೆ ಸ್ವಲ್ಪ ಖಾರ, ಬೆಳ್ಳುಳ್ಳಿ, ಜೀರಿಗೆ, ರುಚಿಗೆ ತಕ್ಕ ಉಪ್ಪು, ಸ್ವಲ್ಪ ಕುಸುಬೆ ಎಣ್ಣೆ ಎಲ್ಲ ಸೇರಿಸಿ ಕಲಬತ್ತಲ್ಲಿ ಕುಟ್ಟಿದಾಗ ತಯಾರಾಗುವದೇ ಮುಟಗಿ. ಎರಡೇ ನಿಮಿಷದಲ್ಲಿ ಇದು ತಯಾರಾಗುತ್ತದೆ. ಈಗಿನ ಮ್ಯಾಗಿಯ ಹಾಗೆ ಸಣ್ಣ ಮಕ್ಕಳಿಂದ ವಯೋವೃದ್ದರವರೆಗೂ ಎಲ್ಲ ವಯೋಮಾನದವರೂ ಇಷ್ಟ ಪಡುವ ಆಹಾರವಾಗಿದೆ.ಇದು ಬಿಸಿಬಿಸಿಯಾಗೆ ತಿನ್ನಬೇಕು. ಇದನ್ನು ನೋಡಿ ಎಷ್ಟೋ ಜನರ ಬಾಯಲ್ಲಿ ನೀರು ಬರುತ್ತೇ ಎಂಬುದು ಎಷ್ಟು ಸತ್ಯವೋ ಅಷ್ಟೇ ಹಲವಾರು ಜನರ ಕಣ್ಣಲ್ಲಿ ನೀರು ಬರುತ್ತೆ ಎಂಬುದು ಅಷ್ಟೇ ಸತ್ಯ ಈ ಮುಟಗಿಯಲ್ಲಿ ಅದೆಷ್ಟೋ ಜನರ ಬಾಲ್ಯದ ಅಜ್ಜಿ ಅಮ್ಮನ ನೆನಪುಗಳು ಮುದುಡಿ ಕುಳಿತಿರಬಹುದು.ಈಗೆಲ್ಲ ನಾವು ಮಾಡರ್ನ್ ಅಂತ ಭೇಲ್ ಪುರಿ, ಪಾನಿಪುರಿ, ಗೋಬಿ ಮಂಚೂರಿಯನ್ ,ವಡಾ ಪಾವ್,Á್ಪವ್ ಭಾಜಿ,ಪಿಜ್ಜಾ, ಬರ್ಗರದಂತ ಫಾಸ್ಟ್ ಫುಢ್ ಇಷ್ಟ ಪಡುತ್ತೇವೆ. ಅವೆಲ್ಲ ಇಂತಹ ನೆನಪುಗಳ ಮುಂದೆ ಎಷ್ಟು ಸಣ್ಣವು ಅನಿಸುತ್ತದೆ. ಈಗ ಮಕ್ಕಳಿಗೆ ಒಂದಿಷ್ಟು ಸಮಯ ಕೊಟ್ಟು ನಮ್ಮ ದೇಸಿ ಸ್ವಾದಿಷ್ಟ ಖಾದ್ಯಗಳನ್ನೆಲ್ಲ ಅವರಿಗೆ ಸಿಗುವಂತೆ ಮಾಡೋಣ.

Leave a Reply

Your email address will not be published. Required fields are marked *

error: Content is protected !!