ಉದಯವಾಹಿನಿ, ಲಿಂಗಸೂಗೂರು: ಚುನಾವಣೆಯಲ್ಲಿ ಮತದಾರರು ಕಡ್ಡಾಯ ಮತದಾನ ಮಾಡಲು ನಾಗರಿಕರು ಜಾಗೃತರಾಗಿ ಎಸಿ ಶಿಂಧೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅವ್ಯವಹಾರ, ಬ್ರಷ್ಟಾಚಾರ, ಆಡಳಿತಾತ್ಮಕ ಮುಂತಾದ ಹಾಗೂ ನರೇಗಾ ಯೋಜನೆಗೆ ಸಂಬಂಧಿಸಿದ ವಿಷಯಗಳು ಸಾರ್ವಜನಿಕ ಕುಂದು ಕೊರತೆ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವುದಿಲ್ಲ. ರಾಯಚೂರ ಜಿಲ್ಲೆಯ ವ್ಯಾಪ್ತಿಯಲ್ಲಿನ ಈ ಕೆಳಕಂಡ ವಿಷಯಗಳಿಗೆ ಮಾತ್ರ ಸಂಬಂಧಿಸಿದ ದೂರುಗಳನ್ನು ಜಿಲ್ಲಾ ಪಂಚಾಯತಿ ಕಛೇರಿಯಲ್ಲಿ ಪ್ರಾಧಿಕಾರದ ಕಾರ್ಯಕ್ಕಾಗಿ ನಿಯೋಜಿಸಿರುವ ವಿಷಯ ನಿರ್ವಾಹಕರಿಗೆ ನೀಡುವುದು.ಎಂದು ಲಿಂಗಸೂಗೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಅವಿನಾಶ್ ಸಂಜೀವನ್ ಸಿಂದೆ ರವರು ಮಾಹಿತಿ ನೀಡಿದರು.
ನೀರು ಸರಬರಾಜು ಆರೋಗ್ಯ ನಿರ್ವಹಣೆ, ರಸ್ತೆ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ ಯಾವುದೇ ಯೋಜನೆಯ ಫಲಾನುಭವಿಗಳನ್ನು ಗುರುತಿಸುವುದು.ಯಾವುದೇ ಯೋಜನೆಯ ಪ್ರಯೋಜನದ ಹಂಚಿಕೆ ನೈರ್ಮಲೀಕರಣ ನಿರ್ವಹಣೆ ಯಾವುದೇ ದಸ್ತಾವೇಜು ಅಥವಾ ಪ್ರಮಾಣ ಪತ್ರವನ್ನು ಮಂಜೂರು ಮಾಡುವುದು ಅಥವಾ ಹೊರಡಿಸುವುದು. ನಿಯಮಿಸಬಹುದಾದ ಯಾವುದೇ ಇತರೆ ವಿಷಯಗಳ ಬಗ್ಗೆ ಚರ್ಚೆ ಚರ್ಚಿಸಲಾಯಿತು.
ಈ ಮೇಲೆ ತಿಳಿಸಿದ ವಿಷಯಗಳಲ್ಲಿ ಕುಂದು ಕೊರತೆ ಇದ್ದಲ್ಲಿ, ಬಾಧಿತರು ದೂರನ್ನು ನಿಗಧಿತ ನಮೂನೆಯ ಅರ್ಜಿಯೊಂದಿಗೆ, ಸಂಬಂಧಿಸಿದ ಸ್ವಯಂ ದೃಡೀಕರಣ ಮಾಡಿದ ಪೂರಕ ದಾಖಲೆಗಳು, ಅಫಿಡವಿಟ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ರಾಯಚೂರ ರವರ ಹೆಸರಿನಲ್ಲಿ ಹತ್ತು ರೂಪಾಯಿಗಳ ಪೋಸ್ಟಲ್ ಆರ್ಡರ್ ಸಲ್ಲಿಸುವುದು ಎಂದು ತಹಶೀಲ್ದಾರ್ ಡಾ.ಮಲ್ಲಪ್ಪ ಯರಗೊಳ ಮಾಹಿತಿ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ್ ಡಾ.ಅಮರೇಶ ಪಾಟೀಲ ಮಾಕಾಪುರ ಪಶು ಸಂಗೋಪನಾ ಇಲಾಖೆ ವೈದ್ಯದಿಕಾರಿ ರಾಚಪ್ಪ ಶಿಕ್ಷಣ ಇಲಾಖೆ ಅಧಿಕಾರಿಗಳು ಪಿಡಿಓಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!