ಉದಯವಾಹಿನಿ, ಕಲಬುರಗಿ: 18ನೇ ಶತಮಾನದ ಸಂತ, ಸಮಾಜ ಸುಧಾರಕ ಶ್ರೀ ಶರಣಬಸವೇಶ್ವರರ 202ನೇ ಪುಣ್ಯ ತಿಥಿಯ ಸ್ಮರಣಾರ್ಥ ಶನಿವಾರದಂದು ಜರುಗಲಿರುವ 202ನೇ ವರ್ಷದ ಶರಣಬಸವೇಶ್ವರ ರಥೋತ್ಸವ ಹಾಗೂ ವಾರ್ಷಿಕವಾಗಿ ಸಂಭ್ರಮಿಸುವ ಐತಿಹಾಸಿಕ ಜಾತ್ರಾ ಮಹೋತ್ಸವಕ್ಕೆ ಕಲಬುರಗಿ ನಗರ ಸಜ್ಜಾಗಿದೆ.
ಕಲಬುರಗಿ ನಗರವು “ಸೂಫಿ-ಸಂತ ತತ್ತ್ವಶಾಸ್ತ್ರ” ದ ಸಂಗಮಕ್ಕೆ ಹೆಸರುವಾಸಿಯಾದ ಪ್ರಸಿದ್ಧ ಶರಣಬಸವೇಶ್ವರ ಪುಣ್ಯಕ್ಷೇತ್ರವನ್ನು ಹೊಂದಿದೆ, ಇಲ್ಲಿ ಶರಣಬಸವೇಶ್ವರರ ಪಾರ್ಥಿವ ಶರೀರÀ ಸಮಾಧಿಯಲ್ಲಿ ಪ್ರತಿμÁ್ಠಪಿಸಲಾಗಿದೆ. ಪ್ರತಿ ದಿನ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಕಾಯಿ-ಕರ್ಪೂರದೊಂದಿಗೆ ಆಗಮಿಸಿ ತಮ್ಮ ಭಕ್ತಿ ನಮನವನ್ನು ಸಲ್ಲಿಸುತ್ತಾರೆ. ಅದೇ ರೀತಿ ಕಲಬುರಗಿಯ ಇನ್ನೊಂದು ಪುಣ್ಯಕ್ಷೇತ್ರವಾದ ಪ್ರಸಿದ್ಧ ಸೂಫಿ ಸಂತ ಖಾಜಾ ಬಂದೇ ನವಾಜ್ ದರ್ಗಾದಲ್ಲಿ ಪ್ರಸಿದ್ಧ ಖಾಜಾ ಬಂದೇ ನವಾಜ್ ಅವರ ಪಾರ್ಥಿವ ಶರೀರವನ್ನು ಪ್ರತಿμÁ್ಠಪಿಸಿದ ಸಮಾಧಿಗೆ ಸಾವಿರಾರು ಭಕ್ತರು ಸೇರಿ ವಸಂತ ಋತುವಿನ ಆರಂಭದಲ್ಲಿ ರಥೋತ್ಸವ ಮತ್ತು ವಾರ್ಷಿಕ ಜಾತ್ರೆಯನ್ನು ನಡೆಸುತ್ತಾರೆ.
ತಮ್ಮ ಇಡೀ ಜೀವನವನ್ನು ಜನರ ಕಲ್ಯಾಣಕ್ಕಾಗಿ ಮತ್ತು ಸಮಾಜದಲ್ಲಿರುವ ಬಡವರ ಮತ್ತು ವಂಚಿತ ವರ್ಗದವರ ಅಗತ್ಯತೆಗಳನ್ನು ಪೂರೈಸಲು ಮುಡಿಪಾಗಿಟ್ಟ ಸಂತ ಶರಣಬಸವೇಶ್ವರರು ತಾವು ಹೋಳಿ ಆಚರಣೆಯ ಐದು ದಿನಗಳ ನಂತರ ಲಿಂಗೈಕ್ಯರಾಗುವ ಮುನ್ಸೂಚನೆ ನೀಡಿದ್ದರು, ಮತ್ತು ಅದೇ ದಿನ ಅವರು ದಾಸೋಹ ಮಹಾಮನೆಯಲ್ಲಿ ಕೊನೆಯುಸಿರೆಳೆದರು. ಈ ದಿನ ಭಕ್ತರು ದಿನವಿಡೀ ಉಪವಾಸವಿದ್ದು, ಸಾಯಂಕಾಲ ಶರಣಬಸವೇಶ್ವರ ದೇಗುಲದ ಆವರಣದಲ್ಲಿ ಜರುಗುವ ರಥೋತ್ಸವದ ನಂತರ ಸಿಹಿತಿಂಡಿ ಸೇರಿದಂತೆ ವಿಶೇಷವಾಗಿ ತಯಾರಿಸಿದ ಭಕ್ಷ್ಯಗಳನ್ನು ಸೇವಿಸಿ ಪೂಜೆ ಸಲ್ಲಿಸುತ್ತಾರೆ. (ಲಿಂಗಾಯತ ಧರ್ಮದವರು, ಶರಣರ ಮತ್ತು ಧಾರ್ಮಿಕ ಮುಖ್ಯಸ್ಥರು ಲಿಂಗೈಕ್ಯರಾದ ದಿನವನ್ನು ಪುಣ್ಯದಿನವೆಂದು ಆಚರಿಸುತ್ತಾರೆ. ಪ್ರತಿ ವರ್ಷ ಈ ವರ್ಷ ನಡೆಯುವ ಪುಣ್ಯಸ್ಮರಣೆಯ ದಿನವನ್ನು ವಿಶೇಷವಾಗಿ ಭಕ್ತರು ಹಬ್ಬವಾಗಿ ಆಚರಿಸುತ್ತಾರೆ).ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗವಾಗಲು ರಾಜ್ಯ ಮತ್ತು ನೆರೆಯ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿಂದ ಧಾರ್ಮಿಕ ಮತ್ತು ಜಾತಿಯ ಅಡೆತಡೆಗಳನ್ನು ಮೀರಿ ಸಾವಿರಾರು ಭಕ್ತರು ಕಲಬುರಗಿ ನಗರದಲ್ಲಿ ಒಂದೆಡೆ ಸೇರುತ್ತಾರೆ.
ಶರಣಬಸವೇಶ್ವರರು ನಿಸ್ವಾರ್ಥ ಸೇವೆಗೆ ಮಾದರಿಯಾದವರು ಮತ್ತು ತಮ್ಮ ಜೀವಿತಾವಧಿಯಲ್ಲಿ ಭಕ್ತರಿಗೆ ಭರವಸೆ ಮತ್ತು ಮೋಕ್ಷದ ದಾರಿದೀಪವಾಗಿದ್ದವರು. ರಾಯಚೂರು, ವಿಜಯಪುರ, ಬೀದರ್ ಸೇರಿದಂತೆ ನೆರೆಯ ಜಿಲ್ಲೆಗಳು ಮತ್ತು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಗಡಿ ಜಿಲ್ಲೆಗಳು ಸೇರಿದಂತೆ ದೂರದ ತಮ್ಮ ತಮ್ಮ ಗ್ರಾಮಗಳಿಂದ ಮೈಲುಗಟ್ಟಲೆ ಭಕ್ತರು ನಡೆದುಕೊಂಡು ಬಂದು ತಮ್ಮ ಇμÁ್ಟರ್ಥಗಳನ್ನು ಈಡೇರಿಸಿಕೊಳ್ಳಲು ಶರಣಬಸವೇಶ್ವರರ ದೇವಸ್ಥಾನಕ್ಕೆ ಆಗಮಿಸುತ್ತಾರೆ. “ಉಚ್ಛಾಯಿ” (ಉತ್ಸವ) ಒಂದು ದಿನ ಮುಂಚಿತವಾಗಿ ನಡೆಯುತ್ತದೆ. ಇದರಲ್ಲಿ ಸಂಸ್ಥಾನದ ಪೂರ್ವ ಪೀಠಾಧಿಪತಿಗಳು ಲಿಂಗೈಕ್ಯರಾದ ವರ್ಷವನ್ನು ಗುರುತಿಸುವದಂಗವಾಗಿ ದೇವಸ್ಥಾನದ ಸುತ್ತಲೂ ವರ್ಣರಂಜಿತವಾಗಿ ಅಲಂಕರಿಸಲ್ಪಟ್ಟ “ಉಚ್ಛಾಯಿ” (ಸಣ್ಣ ರಥ) ಎಳೆಯಲಾಗುತ್ತದೆ. ಉತ್ಸವದಂಗವಾಗಿ ಸಂಜೆ ಮದ್ದು ಪಟಾಕಿಗಳು ದೇವಾಲಯದ ಸುತ್ತಲೂ ಆಕಾಶವನ್ನು ಬೆಳಗುತ್ತವೆ.
