ಉದಯವಾಹಿನಿ, ಬೀದರ್: ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಸುಳ್ಳೆ ಮನೆದೇವರಾಗಿದ್ದು, ಸುಳ್ಳು ಹೇಳಿಕೊಂಡು, ಸ್ವಪಕ್ಷಿಯವರ ಮುನಿಸು ಈ ಬಾರಿ ಅವರಿಗೆ ಸೋಲಿನ ರುಚಿ ದೊರೆಯಲಿದೆ ಎಂದು ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಈಸ್ವರ ಖಂಡ್ರೆ ಹೇಳಿದರು.
ಗುರುವಾರ ನಗರದ ಜಿಲ್ಲಾ ಪತ್ರಿಕ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಔರಾದ್ ತಾಲೂಕಿನ ಬಲ್ಲೂರ್ ಬಳಿ ಸಿಪೆಟ್ ಕಾಮಗಾರಿ ಪ್ರಾರಂಭಿಸುವುದಾಗಿ ಹೇಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಪೂಜೆ ಮಾಡಿಸಿ ನಂತರ ಅಲ್ಲಿ ಕೇಂದ್ರದಿಂದ 90 ಕೋಟಿ ತರುವುದಾಗಿ ಹೇಳಿ ಒಂದು ನಯಾ ಪೈಸೆ ತರಲಿಕ್ಕೆ ಇವರಿಂದ ಆಗಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಂದ ಎಫ್.ರೇಡಿಯೊ ಕೇಂದ್ರಕ್ಕೆ ಚಾಲನೆ ಕೊಡಿಸಿ ಅದು ಅಲ್ಲಿಯೆ ಮಕಾಡೆ ಮಲಗಿದೆ. ವಿಮಾನ ಸೇವೆ ನಿಂತು ಹೋಗಿದೆ. ಕಳೆದ ಹತ್ತು ವರ್ಷದಲ್ಲಿ ಇವರು ಮಾಡಿರುವ ಸಾಧನೆಗಳಾದರೂ ಏನು? ಎಂದು ಪ್ರಶ್ನೆ ಮಾಡಿರುವ ಅವರು, ಕಳೆದ 10 ವರ್ಷದಲ್ಲಿ ಪ್ರಧಾನ ಮಂತ್ರಿ ಆವಾಜ್ ಯೋಜನೆ ಅಡಿ ಜಿಲ್ಲೆಗೆ ಎಷ್ಟು ಮನೆ ತಂದಿದಿರಿ, ಎಷ್ಟು ಜನರಿಗೆ ಶುದ್ದ ಕುಡಿಯುವ ನೀರು ಕೊಟ್ಟಿದ್ದಿರಿ? ರಾಷ್ಟ್ರೀಯ ಹೆದ್ದಾರಿಗಳೆಲ್ಲ ಕಳಪೆ ಕಾಮಗಾರಿ ಆಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ತಪ್ಪಿತಸ್ತರ ವಿರೂದ್ಧ ಕ್ರಮ ಆಗಲಿದೆ ಎಂದರು.
ಬಿಜೆಪಿ ಈಡಿ, ಸಿಬಿಐಗಳನ್ನು ಬಳಿಸಿ ವಿರೋಧ ಪಕ್ಷದವರಿಗೆ ಜೈಲಿಗೆ ಹಾಕುವ ಹುನ್ನಾರ ಎಸಗಿದ್ದಿರಿ, ಎಲೆಕ್ಟ್ರೋಲ್ ಬಾಂಡ್ ಒಂದು ಬ್ರಹ್ಮಾಂಡ ಭ್ರಷ್ಟಾಚಾರವಾಗಿದ್ದು, ಬಾಂಡ್ ದೇಣಿಗೆ ನೀಡಿದವರಿಗೆ ಸರ್ಕಾರದ ಎಲ್ಲ ಟೆಂಡರ್ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲು ಹೊರಟಿದ್ದಾರೆ. ಸಂವಿಧಾನ ಬದಲಿಸುವ ಮಾತುಗಳನ್ನಾಡಿ ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯುವ ಪಿತುರಿ ನಡೆಸಿರುವರು. ಬೆಲೆ ಏರಿಕೆ, ಪೆಟ್ರೋಲ, ಡಿಸಲ್, ಅಡುಗೆ ಅನಿಲ ಸೇರಿದಂತೆ ದಿನನಿತ್ಯದ ವಸ್ತುಗಳು ಸಹ ದುಬಾರಿಯಾಗಿವೆ. 10 ವರ್ಷದ ಬಿಜೆಪಿ ಅಡಳಿತದಲ್ಲಿ ಜಾತಿ, ಜಾತಿಗಳ ಮಧ್ಯ ವಿಷ ಬೀಜ ಬಿತ್ತುವ ಕಾರ್ಯ ನಡೆದಿದ್ದು ಅಭಿವೃದ್ಧಿ ಶುನ್ಯ. ಹಾಗಾಗಿ ದೇಶದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ಬರಲು ಸಾಧ್ಯವಿಲ್ಲ. ರಾಜ್ಯದಲ್ಲಿ ನಾವು ಕನಿಷ್ಟ 25 ಸೀಟು ಗೆಲ್ಲುತ್ತೇವೆ. ಮುಂಬರುವ ಹತ್ತು ವರ್ಷಗಳ ವರೆಗೆ ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ. ಮುಂದೇಯೂ ನಾವೇ ಅಧಿಕಾರಕಲ್ಕೆ ಬರುತ್ತೇವೆ ಎಂದವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!