ಉದಯವಾಹಿನಿ, ಕೆಆರ್ ಪುರ : ಕ್ಷೇತ್ರದ ನೂತನ ಬಿಜೆಪಿ ಕಚೇರಿಯನ್ನು ಕ್ಷೇತ್ರದ ಅಧ್ಯಕ್ಷ ಮುನೇಗೌಡ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕೇಂದ್ರದ ಬಿಜೆಪಿ ಸರ್ಕಾರದ ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸುವಂತೆ ತಿಳಿಸಿದರು.
ಕ್ಷೇತ್ರದಲ್ಲಿ ಬಿಜೆಪಿ ಪಕ್ಷನ್ನು ಬಲಪಡಿಸಬೇಕು, ಬೂತ್ ಸಭೆ, ಕ್ಷೇತ್ರ ಸಭೆಗಳಿಗಾಗಿ ಈ ಕಚೇರಿಯನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.
ಶಾಸಕ ಬೈರತಿ ಬಸವರಾಜ ಅವರ ಸೂಚನೆ ಮೇರೆಗೆ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಕಚೇರಿಯನ್ನು ಉದ್ಘಾಟಿಸಿದ್ದು ಪ್ರತಿಯೊಬ್ಬರೂ ಸಕ್ರಿಯವಾಗಿ ಕಾರ್ಯ ನಿರ್ವಹಿಸಿ ಎಂದು ಹೇಳಿದರು.
ದೇಶದ ಭವಿಷ್ಯ ಕ್ಕಾಗಿ ಮೋದಿ ಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕು, ಅಭ್ಯರ್ಥಿ ಯಾರೇ ಆಗಲಿ ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕೆಆರ್ ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜ ಅವರ ನೇತೃತ್ವ ದಲ್ಲಿ ಅತಿ ಹೆಚ್ಚಿನ ಮತಗಳನ್ನು ಕೊಡಿಸುವ ಮೂಲಕ ಕೇಂದ್ರದ ಗಮನ ಸೆಳೆಯುವ ಕೆಲಸ ಮಾಡ
ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಪ್ರ.ಕಾರ್ಯದರ್ಶಿಗಳಾದ ಲೋಕೇಶ್, ಮಾರ್ಕೆಟ್ ರಮೇಶ್, ಉಪಾಧ್ಯಕ್ಷ ಗಂಗಾಧರ್, ಪಾಲಿಕೆ ಮಾಜಿ ಸದಸ್ಯರಾದ ಗೀತಾ ವಿವೇಕಾನಂದ, ಸುರೇಶ್ ಸಿದ್ದಲಿಂಗಯ್ಯ, ಮುಖಂಡರಾದ ಬಾಕ್ಸರ್ ನಾಗ ರಾಜ್, ಕೃಷ್ಣಮೂರ್ತಿ, ಚಂದ್ರಣ್ಣ, ಭಟ್ಟರಹಳ್ಳಿ ಮಂಜುನಾಥ,ಗಣೇಶ ರೆಡ್ಡಿ, ರಮೇಶ್ ಗೌಡ ಮತ್ತಿತರರಿದ್ದರು.
