ಉದಯವಾಹಿನಿ, ಬೀದರ್ : ಸುಮಾರು 10 ವರ್ಷ 6 ತಿಂಗಳುಗಳ ಕಾಲ ಬೀದರ್ ಜಿಲ್ಲಾ ಪೋಲಿಸ್ ನ ಶ್ವಾನದಳದ (ಸ್ಪೋಟಕ ಪತ್ತೆ ) ಶ್ವಾನ ಬ್ರುನೋ ಇಂದು ನಮ್ಮೆಲ್ಲರನ್ನು ಬಿಟ್ಟು ಅಗಲಿದೆ.
ರಾಜ್ಯಾದ್ಯಂತ ಗಣ್ಯವ್ಯಕ್ತಿಗಳ ಭೇಟಿ ಸಂದರ್ಭ ಎಎಸ್‍ಸಿ ತಂಡದೊಂದಿಗೆ ಭದ್ರತಾ ತಪಾಸಣಾ ಕಾರ್ಯ ಚುರುಕಾಗಿ ಭಾಗಿಯಾಗಿದ್ದು ಹಾಗೂ ವಲಯ ಮಟ್ಟದ ಪೆÇಲೀಸ್ ಕರ್ತವ್ಯ ಕೂಟ ಮತ್ತು ಇತರೆ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನಗಳಲ್ಲಿ ಕೂಡ ಭಾಗಿಯಾಗಿ ಪದಕ ವಿಜೇತವಾಗಿದ್ದು, ನಮ್ಮ ಬೀದರ್ ಜಿಲ್ಲಾಪೋಲಿಸ್ ಗೆ ಕೀರ್ತಿ ತಂದಿದ್ದ ಶ್ವಾನ ಬ್ರುನೋ ನ *ಅಂತ್ಯ ಕ್ರಿಯೆಯನ್ನು ಪೋಲಿಸ್ ಹೆಡ್ ಕ್ವಾರ್ಟನಲ್ಲಿ ಇಂದು ಮಧ್ಯಾಹ್ನ 12:00 ಗಂಟೆಗೆ ನಡೆಯಿತು.
