ಉದಯವಾಹಿನಿ, ಯಾದಗಿರಿ : ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ 2024ರ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ 2024ರ ಮಾರ್ಚ್ 27 ರಿಂದ ಪ್ರತಿದಿನ ಕ್ರಮ ಕೈಗೊಂಡಿರುವ ಮಾಹಿತಿ ಸಲ್ಲಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತರು ಅವರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ 2024ರ ಮಾರ್ಚ್ 29 ರಂದು ಮಾನ್ಯ ಅಬಕಾರಿ ಅಪರ ಆಯುಕ್ತರು (ಜಾರಿ ಮತ್ತು ಅಪರಾಧ) ಕೇಂದ್ರ ಸ್ಥಾನ ಬೆಳಗಾವಿ ರವರ ನಿರ್ದೇಶನ ಮೇರೆಗೆ ಹಾಗೂ ಮಾನ್ಯ ಅಬಕಾರಿ ಜಂಟಿ ಆಯುಕ್ತರು (ಜಾ ಮತ್ತು ತ) ಕಲಬುರಗಿ ವಿಭಾಗ ಕಲಬುರಗಿ ಅವರ ಮತ್ತು ಮಾನ್ಯ ಅಬಕಾರಿ ಉಪ ಆಯುಕ್ತರು ಯಾದಗಿರಿ ಜಿಲ್ಲೆ ಯಾದಗಿರಿ ರವರ ಆದೇಶದಂತೆ, ಹಾಗೂ ಮಾನ್ಯ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಶಹಾಪುರ ಅವರ ನೇತೃತ್ವದಲ್ಲಿ ಸುರಪುರ ತಾಲೂಕಿನ ರಾಜನ ಕೂಳೂರು ತಾಂಡದ ಮೇಲೆ ಸಾಮೂಹಿಕ ಅಬಕಾರಿ ದಾಳಿ ಮಾಡಲಾಗಿ ಉಮೇಶ್ ತಂದೆ ಸೋಮಲಪ್ಪ ರಾಥೋಡ್ ಇತನೆಗೆ ಸೇರಿದ ನಿರ್ಮಾಣ ಹಂತದಲ್ಲಿ ಇರುವ ಕಟ್ಟಡದ ಮೇಲೆ ಅಬಕಾರಿ ದಾಳಿ ನಡೆಸಿದಾಗ ದಾಳಿ ಸಮಯದಲ್ಲಿ ಅಕ್ರಮವಾಗಿ ತಯಾರಿಸಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟ 2ಲೀಟರ ನಷ್ಟು ಕಳ್ಳಬಟ್ಟಿಸರಾಯಿ ಮತ್ತು 75 ಲೀ ಬೆಲ್ಲದ ಕೊಳೆ ವಶಪಡಿಸಿಕೊಂಡು, ಆರೋಪಿತನನ್ನು ಬಂಧಿಸಿ ಸದರಿ ಆರೋಪಿತನ ವಿರುದ್ಧ ಘೋರ ಪ್ರಕರಣವನ್ನು ಅಬಕಾರಿ ಉಪ ನಿರೀಕ್ಷಕರು-1 ಸುರಪುರ ವಲಯ ಅವರು ದಾಖಲಿಸಿ ಪ್ರಥಮ ವರ್ತಮಾನ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
