ಉದಯವಾಹಿನಿ, ಕೂಡ್ಲಿಗಿ: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಉರಿ ಬಿಸಿಲಿನ ತಾಪಮಾನ ಕಡಿಮೆಯಾಗಿ ಬರುವ ದಿನಗಳಲ್ಲಿ ಉತ್ತಮ ಮಳೆಯಾಗುವ ಮೂಲಕ ರೈತನ ಬದುಕು ಹಸನಾಗಲಿ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಪ್ರಾರ್ಥನೆ ಸಲ್ಲಿಸಿದರು. ಅವರು ಪಟ್ಟಣದ ಕೊಟ್ಟೂರು ರಸ್ತೆಯಲ್ಲಿರುವ ಎರಡು ಈದ್ಗಾಗಳಿಗೆ ತೆರಳಿ ಇಂದು ಜರುಗಿದ ಮುಸ್ಲಿಂ ಭಾಂಧವರ ಪವಿತ್ರ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಮಾತನಾಡುತ್ತ ಎಲ್ಲಾ ಮುಸ್ಲಿಂ ಭಾಂಧವರಿಗೆ ಹಬ್ಬದ ಶುಭಕೋರಿ ಎಲ್ಲರೂ ಬಿಸಿಲಿನ ತಾಪಮಾನ ಕುರಿತಾದ ಹಾಗೂ ಜನರು ಇದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾದ ಮಾಹಿತಿ ನೀಡಿದ ಶಾಸಕರು ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾದಲ್ಲಿ ಬರದ ನಾಡು ಹಸಿರಿನಿಂದ ಕಂಗೊಳಿಸಿ ಅನ್ನದಾತನ ಬದುಕು ಹಸನಾಗಲಿ ಎಂದು ಶಾಸಕ ಡಾ ಶ್ರೀನಿವಾಸ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಮಾಜಿ ಸಚಿವ ಎನ್ ಎಂ ನಬೀಸಾಬ್ ಮಾತನಾಡಿ ರಂಜಾನ್ ಹಬ್ಬವು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಬಿಸಿಲಿನ ತಾಪಮಾನ ಕಡಿಮೆಯಾಗುವ ಬಗ್ಗೆ ಮತ್ತು ಮಳೆ ಬೆಳೆ ಉತ್ತಮವಾಗುವ ಕುರಿತು ಈ ಭಾರಿ ಮುಸ್ಲಿಂ ಭಾಂಧವರು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದರು. ಪಟ್ಟಣದ ಸಿಯಾ ಜಮಾತ್ ಹಾಗೂ ಅಲಿಯಾದೀಸ್ ಎಂಬ ಎರಡು ಈದ್ಗಾ ಮೈದಾನದಲ್ಲಿ ಪವಿತ್ರ ರಂಜಾನ್ ಹಬ್ಬದ ಕುರಿತಾದ ಪ್ರಾರ್ಥನೆಯಲ್ಲಿ ಆಯಾ ಈದ್ಗಾದ ಮೌಲಿಗಳಾದ ಆಕಿಲ್ ಸಾಬ್ ಮತ್ತು ಅನ್ವರ್ ಸಾಬ್ ಮೌಲಿಗಳು ಹಬ್ಬದ ಕುರಿತಾದ ಶುಭ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಪಟ್ಟಣದ ಮುಸ್ಲಿಂ ಮುಖಂಡರು, ಮಕ್ಕಳು ಹೊಸ ಬಟ್ಟೆಗಳ ಧರಿಸಿ ಹಬ್ಬದ ಸಡಗರದಲ್ಲಿ ಭಾಗಿಯಾಗಿದ್ದರು. ಬೆಳಿಗ್ಗೆ 7-30ರಿಂದ 10ಗಂಟೆವರೆಗೆ ಎರಡು ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು. ಕೂಡ್ಲಿಗಿ ಶಾಸಕರಾಧೀಯಾಗಿ ಭಾಗವಹಿಸಿ ರಂಜಾನ್ ಹಬ್ಬದ ಸಡಗರದಲ್ಲಿ ಸಾಕ್ಷಿಯಾಗಿದ್ದರು. ಕೂಡ್ಲಿಗಿ ಡಿವೈಎಸ್ ಪಿ ನೇತೃತ್ವದಲ್ಲಿ ಈದ್ಗಾ ಹಾಗೂ ಮುಸ್ಲಿಂ ಭಾಂಧವರು ಒಟ್ಟಾಗಿ ಬಂದೋಗುವ ರಸ್ತೆಗಳಲ್ಲಿ ಕೂಡ್ಲಿಗಿ ಸಿಪಿಐ, ಕೂಡ್ಲಿಗಿ ಪಿಎಸ್ಐ ಮತ್ತು ಸಿಬ್ಬಂದಿ ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
