ಉದಯವಾಹಿನಿ, ಬೆಂಗಳೂರು : ರಾಜ್ಯದಲ್ಲಿರುವ ಎಲ್ಲಾ 270 ಸರ್ಕಾರಿ ಹಾಗೂ 192 ಖಾಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿರುವ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (NCVT) ಸಂಯೋಜನೆ ಹೊಂದಿರುವ ವೃತ್ತಿಗಳಿಗೆ ಆನ್‌ಲೈನ್ ಮುಖಾಂತರ ಇಲಾಖಾ ವೆಬ್‌ಸೈಟ್: www.cite.karnataka.gov.in ಮೀಸಲಾತಿ ಆಧಾರದ ಮೇಲೆ ಆಗಸ್ಟ್ – 2024ನೇ ಸಾಲಿಗೆ ಪ್ರವೇಶ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು www.cite.karnataka.gov.in ನೇರವಾಗಿ ಅಥವಾ ಹತ್ತಿರದ ಸರ್ಕಾರಿ / ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ/ಸಾರ್ವಜನಿಕ ಸೈಬರ್ ಕೆಫೆಗಳ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.
ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (NCVT) ನಿಂದ ಸಂಯೋಜನೆ ಹೊಂದಿ ಅನುಷ್ಠಾನಗೊಳಿಸಿರುವ 52 ವಿವಿಧ ವೃತ್ತಿಗಳಲ್ಲಿ ತರಬೇತಿ ನೀಡಲಾಗುವುದು.
ಅಭ್ಯರ್ಥಿಗಳು ಪ್ರವೇಶ ಸಮಯದಲ್ಲಿ ನೀಡುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಗಳನ್ನು ತರಗತಿಗಳು ಮತ್ತು ಎಟಟಟ ಪರೀಕ್ಷೆಗಳು ಮುಗಿಯುವರೆಗೆ ಬದಲಾವಣೆ ಮಾಡುವಂತಿಲ್ಲ. ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನೋಂದಣಿ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಗೆ ಮಾತ್ರ ರವಾನಿಸಲಾಗುವುದು.S.S.L.C Board 6 CBSE (Council of Boards of School Education, New Delhi) ರವರಿಂದ ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಗಳಿಂದ 10ನೇ ತರಗತಿಯ ಪ್ರಮಾಣಪತ್ರ ಹೊಂದಿರುವಂತಹ ಅಭ್ಯರ್ಥಿಗಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

 

Leave a Reply

Your email address will not be published. Required fields are marked *

error: Content is protected !!