ಉದಯವಾಹಿನಿ, ಕಲಬುರಗಿ:  ಅಯೋಧ್ಯೆಯ ರಾಮಲಲ್ಲಾನ ದರ್ಶನಕ್ಕೆ ತೆರಳುತ್ತಿದ್ದ ನಗರದ ಮೂವರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಓಂ ನಗರದ ನಿವಾಸಿಗಳಾದ ಶಿವರಾಜ, ತಂಗೆಮ್ಮಾ ಸೇರಿ ಮೂವರು ಮೃತಪಟ್ಟ ಮಾಹಿತಿ ಇದೆ. ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ. ಪ್ರಯಾಗರಾಜ್ ಹೆದ್ದಾರಿಯಲ್ಲಿ ಟಿಟಿ ಹಾಗೂ ಲಾರಿ ನಡುವೆ ನಡೆದ ಡಿಕ್ಕಿಯಲ್ಲಿ ಮೂವರು ಮೃತಪಟ್ಟಿರುವುದನ್ನು ಅಯೋಧ್ಯೆ ಪೊಲೀಸರು ಖಚಿತ ಪಡಿಸಿದ್ದಾರೆ.
ಅಪಘಾತದಲ್ಲಿ ಸುಗಲಾಬಾಯಿ, ಅನುರಪ್ಪ, ರಾಜಾರಾಂ, ತಾರಾವತಿ, ಪ್ರೀತಿ, ಶಿವಲೀಲಾ, ಚಂದ್ರಕಾಂತ, ಇಂದು, ಚಂದ್ರಮ್ಮ, ಮಹದೇವ ಸೇರಿ 11 ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!