ಉದಯವಾಹಿನಿ, ನವಲಗುಂದ : ಜಾತ್ರೆಗಳು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ದ್ಯೋತಕವಾಗಿದ್ದು, ಈ ಆಚರಣೆಗಳ ಮೂಲಕ ಎಲ್ಲರೂ ಪರಸ್ಪರ ಸಾಮರಸ್ಯದೊಂದಿಗೆ ಜೀವನ ನಡೆಸಲು ಸಾಧ್ಯವಾಗುತ್ತದೆ ಜಗದ್ಗುರು ಶ್ರೀ ಅಜಾತ ನಾಗಲಿಂಗಸ್ವಾಮಿ ಮಠದ ವೀರಯ್ಯ ಸ್ವಾಮೀಜಿ ನುಡಿದರು.
ಪಟ್ಟಣದ ಕುರಬರ ಓಣಿಯ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ಬೀರೇಲಿಂಗೇಶ್ವರ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು ಸಮಾಜದಲ್ಲಿ ದೇವಸ್ಥಾನಗಳು ಜ್ಞಾನ, ವೈರಾಗ್ಯ ಭಕ್ತಿಯ ಸಂಗಮವಾಗಿವೆ. ಜಾತ್ರೆ, ಧಾರ್ಮಿಕ ಉತ್ಸವ ಏರ್ಪಡಿಸುವ ಮೂಲಕ ಹಾಲುಮತ ಸಮಾಜದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಭಕ್ತರು ಸಮಾಜಕ್ಕೆ ಆದರ್ಶವಾಗಿ ಮತ್ತೂಬ್ಬರಿಗೆ ಪ್ರೇರಣೆಯಾಗಿದ್ದಾರೆ ಎಂದರು.
ಬೆಳಿಗ್ಗೆ ಬೀರಲಿಂಗೇಶ್ವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಿತು. ನಂತರ ಬೀರಲಿಂಗೇಶ್ವರ ಮೂರ್ತಿ ಹೊತ್ತ ಪಲ್ಲಕ್ಕಿಗಳ ಮೆರವಣಿಗೆ ನೀಲಮ್ಮನ ಜಲಾಶಯದಲ್ಲಿ ಪೂಜೆ ಸಲ್ಲಿಸಿ ಮರಳಿ ದೇವಸ್ಥಾನಕ್ಕೆ ಆಗಮಿಸಿತು.ಬೀರಲಿಂಗೇಶ್ವರ ಜಾತ್ರೆಯ ಪಲ್ಲಕ್ಕಿ ಮೆರವಣಿಗೆಯು ಸಂಪೂರ್ಣ ಭಂಡಾರಮಯವಾಗಿತ್ತು. ನಂತರ ಅನ್ನಪ್ರಸಾದ ಜರುಗಿತು.
ರಾತ್ರಿ ಬೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘ ನರಗುಂದ ಹಾಗೂ ರಾಮದುರ್ಗ ತಾಲ್ಲೂಕಿನ ಮುಳ್ಳೂರು ಮಧ್ಯೆ ಡೊಳ್ಳಿನ ಪದ ಗಾಯನ ಸ್ಪರ್ಧೆಗಳು ನಡೆದವು
ಸಂಜು ಹಿರೇಮಠ, ಡಿ ಎಫ್ ಮಾಬನೂರ, ಶಿವಾನಂದ ಕೊಳಲಿನ, ಮಾಳಪ್ಪ ಮೂಲಿಮನಿ, ಹನುಮಂತ ಬಂಡಿವಾಡ, ಕಲ್ಲಪ್ಪ ಮುಳ್ಳೂರು, ಎಲ್ಲಪ್ಪ ದಾಡಿಬಾವಿ, ಶಿವಪ್ಪ ಬಂಡಿವಾಡ, ಲಕ್ಷ್ಮಣ್ ಮೂಲಿಮನಿ, ಹನುಮಂತ ಬಂಡಿವಾಡ, ಸಿದ್ದಪ್ಪ ಕೊಳಲಿನ, ದ್ಯಾಮಣ್ಣ ಪೂಜಾರಿ ರವಿ ಬೆಂಡಿಗೇರಿ, ಸಿದ್ದು ಬಸಾಪುರ, ಬಸವರಾಜು ಕೊಳಲಿನ ಸೇರಿದಂತೆ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಯ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!