ಉದಯವಾಹಿನಿ, ಬೆಂಗಳೂರು: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಮಹಿಳೆಯರು ಪ್ರಯಾಣಿಸುವ ಶಕ್ತಿ ಯೋಜನೆ ಸರಕು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಹೆಚ್ಚಿಸಿದೆ.2023 ರ ಮೇ ತಿಂಗಳಿನಲ್ಲಿ ಜಾರಿಗೆ ಬಂದಿದ್ದ ಶಕ್ತಿ ಯೋಜನೆಗೆ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳುತ್ತಿರುವ ಕಾರಣ ಜಿಎಸ್‌ಟಿಯು ಏರಿಕೆಯಾಗಿರುವುದು ಸರ್ಕಾರದ ಹಣಕಾಸು ನೀತಿ ಸಂಸ್ಥೆ ನಡೆಸಿರುವ ಅಧ್ಯಯನದಿಂದ ಬಹಿರಂಗವಾಗಿದೆ. ವಿಶೇಷವಾಗಿ ಮಹಿಳಾ ಕಾರ್ಮಿಕರು ಈ ಯೋಜನೆಯ ಹೆಚ್ಚಿನ ಫಲಾನುಭವಿಗಳಾಗಿರುವುದರಿಂದ ಅವರ ಭಾಗವಹಿಸುವಿಕೆ ಜಿಎಸ್‌ಟಿ ಸಂಗ್ರಹವನ್ನು ಹೆಚ್ಚಿಸಿದೆ ಎಂದು ಎಪ್‌ಪಿಐ ನಡೆಸಿರುವ ಅಧ್ಯಯನದಲ್ಲಿ ಬಹಿರಂಗವಾಗಿದೆ.
ರಾಜ್ಯ ಹಣಕಾಸು ನೀತಿ ಸಂಸ್ಥೆ (ಎಫ್‌ಪಿಐ) ನಡೆಸಿದ ಅಧ್ಯಯನದ ಪ್ರಕಾರ, ಕಳೆದ ವರ್ಷ, ಶಕ್ತಿ ಯೋಜನೆಯನ್ನು ಪ್ರಾರಂಭಿಸಿದಾಗ, ಈ ವರ್ಷದ ಮಾರ್ಚ್‌ವರೆಗೆ, ಜಿಎಸ್‌ಟಿ ಸಂಗ್ರಹವು 309.64 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ.ಏಕೆಂದರೆ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾಗಿರುವದರಿಂದ ಉಳಿತಾಯ ಯೋಜನೆ ಯಥೇಚ್ಛವಾಗಿ ಹೆಚ್ಚಾಗುತ್ತಿದ್ದು, ಇದು ಸರ್ಕಾರದ ಬೊಕ್ಕಸಕ್ಕೂ ಪರೋಕ್ಷವಾಗಿ ಆದಾಯವನ್ನು ಹೆಚ್ಚಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪ್ರಮುಖ ಖಾತರಿ ಯೋಜನೆಯಾದ ಶಕ್ತಿಯ ಆರ್ಥಿಕ ಪರಿಣಾಮವನ್ನು ಅಳೆಯುವ ಮೊದಲ ಅಧ್ಯಯನ ಇದಾಗಿದೆ.ಪ್ರಯಾಣದಲ್ಲಿ ಉಳಿಸಿದ ಮೊತ್ತವು ಪ್ರಯಾಣಿಕರಿಗೆ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಅವರು ಇತರ ಅಗತ್ಯ ವಸ್ತುಗಳ ಬಳಕೆಗೆ ಸಂಪೂರ್ಣ ಮೊತ್ತವನ್ನು ಖರ್ಚು ಮಾಡುತ್ತಾರೆ ಎಂದು ಎಫ್‌ಪಿಐ ಸಂಶೋಧನಾ ಅಧ್ಯಯನದಲ್ಲಿ ತಿಳಿದುಬಂದಿದೆ.
