ಉದಯವಾಹಿನಿ, ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬೃಹತ್‌ ಹಗರಣದಲ್ಲಿ ಸಚಿವ ನಾಗೇಂದ್ರ ಅವರ ತಲೆದಂಡವನ್ನು ತಪ್ಪಿಸಲು ನಾನಾ ರೀತಿಯ ಸರ್ಕಸ್‌ಗಳು ನಡೆಯುತ್ತಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ 162 ಕೋಟಿ ರೂ.ಗಳ ಹಗರಣವನ್ನು ಕೆಣಕಲು ಕಾಂಗ್ರೇಸ್ ಸಿದ್ಧತೆ ನಡೆಸಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 187 ಕೋಟಿ ರೂ.ಗಳು ನಿಗಮದ ಉಪಖಾತೆಗಳಿಗೆ ವರ್ಗಾವಣೆಯಾಗಿರುವಂತೆ ಅಲ್ಲಿಂದ ಬೇರೆ ಬೇರೆ ಖಾತೆಗಳಿಗೂ ಸಂದಾಯವಾಗಿದೆ ಎಂಬ ಆರೋಪಗಳಿದ್ದು, ಸಂಪುಟದಲ್ಲಿ ಬಹಳಷ್ಟು ಮಂದಿ ಈ ಹಗರಣದ ಬಗ್ಗೆ ಸಿಡಿಮಿಡಿಗೊಂಡಿದ್ದಾರೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂಬ ಚರ್ಚೆಗಳು ತೀವ್ರವಾಗಿ ನಡೆಯುತ್ತಿವೆ. ಬಿಜೆಪಿ ಸಚಿವ ನಾಗೇಂದ್ರ ಅವರ ತಲೆದಂಡಕ್ಕೆ ಪಟ್ಟು ಹಿಡಿದು ಜೂನ್‌ 6 ರವರೆಗೂ ಗಡುವು ನೀಡಿದೆ. ಕಾಂಗ್ರೇಸ್ ನ ಒಂದು ಪಾಳಯ ಸಚಿವ ನಾಗೇಂದ್ರ ಅವರ ತಲೆದಂಡವಾಗಲಿ ಎಂದು ಹೇಳುತ್ತಿದೆ. ಹೈಕಮಾಂಡ್‌ ಮಟ್ಟದಲ್ಲೂ ಇದಕ್ಕೆ ಸಕಾರಾತ್ಮಕ ಸೂಚನೆಗಳು ಬಂದಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಪ್ರತ್ಯೇಕ ಸಭೆ ನಡೆಸಿ ತನಿಖೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ ಏಕಾಏಕಿ ನಾಗೇಂದ್ರ ಅವರಿಂದ ರಾಜೀನಾಮೆ ಪಡೆದುಕೊಂಡರೆ ಸರ್ಕಾರ ಮತ್ತಷ್ಟು ಮುಜುಗರಕ್ಕೊಳಗಾಗಬೇಕಾಗುತ್ತದೆ, ಹಗರಣವನ್ನು ಒಪ್ಪಿಕೊಂಡಂತಾಗುತ್ತದೆ ಎಂಬ ಗೊಂದಲಗಳು ಕಾಂಗ್ರೇಸ್ಸಿಗರನ್ನು ಕಾಡುತ್ತಿವೆ.
ವಿರೋಧ ಪಕ್ಷ ಬಿಜೆಪಿ ಕೂಡ ಈ ಹಗರಣದಲ್ಲಿ ನಿರೀಕ್ಷಿತ ಮಟ್ಟ ಧ್ವನಿಯೇರಿಸದೆ ಮೃದು ಧೋರಣೆಯಿಂದ ಪ್ರತಿಕ್ರಿಯಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಮೂಲ ಕಾರಣ ಬಿಜೆಪಿ ಸರ್ಕಾರದ ಅವಽಯಲ್ಲಿ ಪರಿಶಿಷ್ಟ ಜಾತಿಯ ನಿಗಮವೊಂದರಲ್ಲಿ ನಡೆದಿರುವ 162 ಕೋಟಿ ರೂ.ಗಳ ಹಗರಣ ಎಂದು ಹೇಳಲಾಗುತ್ತಿದೆ.

 

Leave a Reply

Your email address will not be published. Required fields are marked *

error: Content is protected !!