ಉದಯವಾಹಿನಿ, ಬೆಂಗಳೂರು: ಎಂಎಲ್ಸಿ ಚುನಾವಣೆ ಮತ್ತು ಲೋಕಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ಮತ ಎಣಿಕೆಯ ದೃಷ್ಟಿಯಿಂದ ರಾಜ್ಯಾದ್ಯಂತ ಐದು ದಿನಗಳ ಕಾಲ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರಲಿದ್ದು, ಜೂನ್ 2, 4 ಮತ್ತು 6 ರಂದು ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಜೂನ್ 1 ಮತ್ತು ಜೂನ್ 3 ರಂದು ಭಾಗಶಃ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಅಂಗವಾಗಿ ಏಪ್ರಿಲ್ 24 ರಿಂದ 26 ರವರೆಗೆ ಮದ್ಯ ಮಾರಾಟ ನಿಷೇಧದಿಂದ ಈಗಾಗಲೇ ತೀವ್ರ ಹೊಡೆತಕ್ಕೆ ತುತ್ತಾಗಿರುವ ಆಹಾರ ಮತ್ತು ಪಾನೀಯ (ಎ್ ಬಿ) ಉದ್ಯಮದಲ್ಲಿರುವವರಿಗೆ ಇದು ಮತ್ತೊಂದು ದೊಡ್ಡ ಹೊಡೆತ ಎಂದಿದ್ದಾರೆ.
ಒಟ್ಟು 5 ದಿನಗಳ ಕಾಲ ಮದ್ಯ ನಿಷೇಧ ಮಾಡಲಾಗಿದೆ. ಈ ಕುರಿತು ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ. ಜೂನ್ 3 ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಜೂನ್ 4 ರಂದು ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಇನ್ನು ಜೂನ್ 6 ರಂದು ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ನಡೆಯಲಿದೆ. ಹೀಗಾಗಿ ಜೂನ್ 1 ರಿಂದ ಜೂನ್ 6ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜೂನ್ 1 ರಿಂದ ಜೂನ್ 6ರ ವರೆಗೆ ಬಾರ್, ವೈನ್ ಶಾಪ್, ರೆಸ್ಟೋರೆಂಟ್, ಕ್ಲಬ್, ಹೊಟೆಲ್, ಅಂಗಡಿಗಳಲ್ಲಿ ಮದ್ಯ ಮಾರಾಟ, ಶೇಖರಣೆ ನಿಷೇಧಿಸಲಾಗಿದೆ.ಜೂನ್ 03 ರಂದು ಪರಿಷತ್ ಚುನಾವಣೆಗೆ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮತದಾನಕ್ಕೂ ಮುನ್ನ 48 ಗಂಟೆಗಳ ಕಾಲ ಅಂದರೆ ಜೂನ್ 1 ಮತ್ತು 2 ರಂದು ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಜೂನ್ 4 ಬಳಿಕ ಅಂದರೆ ಜೂನ್ 06 ರಂದು ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜೂನ್ 6ರ ಸಂಜೆ 6 ಗಂಟೆವರೆಗೂ ಮದ್ಯ ಮಾರಾಟ ಬ್ಯಾನ್ ಆಗಲಿದೆ.
