ಉದಯವಾಹಿನಿ, ಕೆಆರ್‌ ನಗರ :ಮಹಿಳೆ ಕಿಡ್ನಾಪ್‌ ಕೇಸ್‌ನಲ್ಲಿ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ. ಯಾವುದೇ ಕ್ಷಣದಲ್ಲಿ ಭವಾನಿ ರೇವಣ್ಣ ಬಂಧನ ಸಾಧ್ಯತೆ ಇದೆ. ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್​ ಶಾಸಕ ಎಚ್​ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಜಾಮೀನು ಅರ್ಜಿ ವಜಾಗೊಂಡಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಇಂದು (ಮೇ 31) ಭವಾನಿ ರೇವಣ್ಣ ಅವರಿಗೆ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ.

ಭವಾನಿ ರೇವಣ್ಣಗೆ ಬಂಧನದ ಭೀತಿ ಎದುರಾಗಿದೆ. ಯಾವುದೇ ಕ್ಷಣದಲ್ಲಿ ಭವಾನಿ ರೇವಣ್ಣ ಬಂಧನವಾಗುವ ಸಾಧ್ಯತೆ ಇದೆ. ಹೀಗೆನಾದ್ರೂ ಆದ್ರೆ ಒಂದೇ ದಿನ ಎಚ್‌ಡಿ ರೇವಣ್ಣ ಕುಟುಂಬಕ್ಕೆ ಡಬಲ್‌ ಶಾಕ್‌ ಆಗಲಿದೆ. ಸಂಜೆ ಪ್ರಜ್ವಲ್‌ ರೇವಣ್ಣ ಜೂನ್‌ 6 ವರೆಗೆ ಎಸ್‌ಟಿಡಿ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಇದರ ಬೆನ್ನಲ್ಲೇ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಯಾವುದೇ ಸಮಯದಲ್ಲಿ ಭವಾನಿ ರೇವಣ್ಣ ಅರೆಸ್ಟ್‌ ಆಗಬಹುದು.
ಈ ಹಿಂದೆ ತಮ್ಮ ಒಂದೂವರೆ ಕೋಟಿ ಕಾರಿಗೆ ಸೈಕಲ್‌ನಲ್ಲಿ ಬಂದ ವ್ಯಕ್ತಿ ಟಚ್‌ ಮಾಡಿದ್ದಕ್ಕೆ ಬಾಯಿಗೆ ಬಂದ ಹಾಗೇ ಬೈದಿದ್ದರು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಒಂದೂವರೆ ಕೋಟಿ ಕಾರಿನ ಒಡತಿ ಕೊನೆಗೆ 15 ಲಕ್ಷ ಮೌಲ್ಯದ ಪೊಲೀಸ್‌ ಜೀಪ್‌ ಏರೋದು ಫಿಕ್ಸ್‌ ಅಂತಿದ್ದಾರೆ ನೆಟ್ಟಿಗರು.

 

Leave a Reply

Your email address will not be published. Required fields are marked *

error: Content is protected !!