ಉದಯವಾಹಿನಿ,ಭಾಲ್ಕಿ: ತಾಲ್ಲೂಕಿನ ಬ್ಯಾಲಹಳ್ಳಿ (ಕೆ) ಗ್ರಾಮದ ಬಸ್ ನಿಲುಗಡೆಯ ಸ್ಥಳದಲ್ಲಿ ಅದೇ ಗ್ರಾಮದ ನಿವಾಸಿ ಆಗಿರುವ ಪೌಲ್ ಸಂಜುಕುಮಾರ ಹಲಗೆ ಬಸ್ ಕಂಡಕ್ಟರ್ ಪ್ರಕಾಶ ನಿಡೋದೆ, ಮೀಸಲು ಚಾಲಕ ಪವಡಪ್ಪ ಚನ್ನಪ್ಪ ಅವರ ಮೇಲೆ  ಹಲ್ಲೆ ನಡೆಸಿದ್ದಾನೆ.
ಘಟನೆ ವಿವರ: ಹುಮನಾಬಾದ್ ಬಸ್ ಘಟಕಕ್ಕೆ ಸೇರಿರುವ ಬೀದರ್-ಹುಬ್ಬಳ್ಳಿ ಮಾರ್ಗದ ಬಸ್ ಬ್ಯಾಲಹಳ್ಳಿ (ಕೆ) ಬಸ್ ನಿಲುಗಡೆ ಸ್ಥಳದಲ್ಲಿ ನಿಂತಾಗ ಬಸ್ ಪ್ರಯಾಣಿಕ, ಕಂಡಕ್ಟರ್ ಮಧ್ಯೆ ಚಿಲ್ಲರೆ ಹಣಕ್ಕಾಗಿ ವಾದ-ವಿವಾದ ನಡೆಯುತ್ತಿತ್ತು. ಆಗ ಸ್ಥಳದಲ್ಲಿಯೇ ಇದ್ದ ಪೌಲ್ ತನಗೆ ಸಂಬಂಧವೇ ಇರದ ವಿಷಯದಲ್ಲಿ ಮೂಗು ತೋರಿಸಿ ಕಂಡಕ್ಟರ್ ಪ್ರಕಾಶ, ಮೀಸಲು ಚಾಲಕ ಪವಡಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.ಬಸ್ ನಲ್ಲಿದ್ದ ಪ್ರಯಾಣಿಕರು ಕಂಡಕ್ಟರ್ ಮತ್ತು ಮೀಸಲು ಚಾಲಕನನ್ನು ಹಳ್ಳಿಖೇಡ (ಬಿ)ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ ಎಂದು ಪ್ರಕಾಶ ಹಾಗೂ ಪವಡಪ್ಪ ಅವರು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಧನ್ನೂರ (ಎಚ್) ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *

error: Content is protected !!