ಉದಯವಾಹಿನಿ, ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಪ್ರತಿ ಟೇಬಲ್‌ಗೂ ತಲಾ ಒಂದೊಂದು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ಗಿರಿನಾಥ್ ಇಂದಿಲ್ಲಿ ತಿಳಿಸಿದರು.
ಇವಿಎಂಗಳನ್ನಿಟ್ಟಿರುವ ಸ್ಟ್ರಾಂಗ್ ರೂಂಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿ ಫಲಿತಾಂಶ ಪ್ರಕಟಣೆಗೆ ಇನ್ನಿಲ್ಲದಂತಹ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ನಗರದ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.ಒಂದೊಂದು ರೂಮಿನಲ್ಲಿ 14 ಟೆಬಲ್‌ಗಳನ್ನು ಹಾಕಲಾಗುವುದು ಈ ಬಾರಿ ಹೆಚ್ಚಿನ ಪ್ರಮಾಣದ ಪೋಸ್ಟಲ್ ಬ್ಯಾಲೆಟ್ ಬಂದಿರುವುದರಿಂದ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆಗೆ ಪ್ರತ್ಯೇಕ ರೂಮ್ ಮಾಡಲಾಗಿದ್ದು, ಏಕಕಾಲಕ್ಕೆ ಪೋಸ್ಟಲ್ ಬ್ಯಾಲೆಟ್‌ಗಳ ಮತ ಎಣಿಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಮತ ಎಣಿಕೆ ಕಾರ್ಯಕ್ಕೆ 1200 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಸಂದರ್ಭದಲ್ಲಿ ಆನ್ ಕೋರ್ ಅಂತ ಎಲೆಕ್ಷನ್ ಕಮಿಷನ್ ಸಾಫ್ಟವೇರ್ ಇದೆ ಅದರಲ್ಲಿ ಮಾಹಿತಿ ಎಂಟ್ರಿ ಮಾಡಲಾಗುವುದು ಎಂದು ಅವರು ಹೇಳಿದರು.ಮತ ಎಣಿಕೆ ಮಾಡುವ ಪ್ರತಿ ಟೆಬಲ್‌ಗೂ ಒಂದೊಂದು ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಕಾರಿಡಾರ್‌ಗಳಲ್ಲಿ ಆಗು ಚಟುವಟಿಕೆಗಳ ಮೇಲೂ ತೀವ್ರ ನಿಗಾ ವಹಿಸಲಾಗುವುದು ಎಂದು ಅವರು ವಿವರಿಸಿದರು. ಮಾಧ್ಯಮದವರಿಗೆ ಪ್ರತ್ಯೇಕ ರೂಮ್ ವ್ಯವಸ್ಥೆ ಮಾಡಲಾಗಿದೆ ಅವರಿಗೆ ಇನ್‌ಸೈಡ್ ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ ಎಂದು ತುಷಾರ್‌ಗಿರಿನಾಥ್ ತಿಳಿಸಿದರು.ಸಾಕಷ್ಟು ಸಂಖ್ಯೆಯಲ್ಲಿ ಮೈಕ್ರೋ ಅಬ್ಸರ್ವರ್ ಇರ್ತಾರೆ, ನಾಳೆ ಬೆಳಿಗ್ಗೆ ಯಾವ ಟೇಬಲ್‌ಗೆ ಯಾವ ಸಿಬ್ಬಂದಿ ಹೋಗಬೇಕು ಅಂತ ಅಬ್ಸರ್ವರ್ ಎದುರು ತೀರ್ಮಾನ ಮಾಡಲಾಗುತ್ತದೆ ಎಂದರು.
