ಉದಯವಾಹಿನಿ, ಮೈಸೂರು: ಇದು ಜನಸಾಮಾನ್ಯರ ಗೆಲುವು. ಚಾಮುಂಡಿ ತಾಯಿ ಮತ್ತು ಕಾವೇರಮ್ಮನ್ನ ಆಶೀರ್ವಾದದಿಂದ ನಾನು ಗೆದ್ದಿದ್ದೇನೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದೇ ಗೆಲುವು ಸಿಕ್ಕಿರುವುದನ್ನು ಎಂದೂ ಮರೆಯಲಾಗದು ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂತಸ ಹಂಚಿಕೊಂಡರು.ತಮ್ಮ ಗೆಲುವು ಖಚಿತವಾಗುತ್ತಿದಂತೆ ಮತ ಎಣಿಕೆ ಕೇಂದ್ರಕ್ಕೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಗೆಲುವಿನ ನಗೆ ಬೀರುತ್ತಾ ಮತದಾರರಿಗೆ ಮತ್ತು ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸಿದರು.
ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ ಮಾಡಬೇಕಾಗುತ್ತದೆ. ನಂತರ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಐದು ವರ್ಷಗಳ ಕಾಲ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡಲಾಗುತ್ತದೆ..ಮೈಸೂರು-ಕೊಡಗು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯನ್ನು ಸ್ಪಷ್ಟವಾಗಿ ಮಾಡುತ್ತೇವೆ. ಇದಕ್ಕೆ ಎಲ್ಲರೂ ಕುಳಿತು ರೂಪರೇಷೆ ಸಿದ್ಧ ಮಾಡಿಕೊಳ್ಳಲಾಗಿದೆ ಎಂದರು.
ಮುಂದಿನ 5 ವರ್ಷ ನೀವು ಯಾವುದೇ ಪಕ್ಷದಲ್ಲಿ ಇರಿ, ಯಾವುದೇ ಸಿದ್ಧಾಂತ ಅನುಸರಿಸಿ ಎಲ್ಲರಿಗೂ ಕೆಲಸ ಮಾಡಿಕೊಡುತ್ತೇನೆ. ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ನನ್ನ ಮೇಲಿನ ಪ್ರೀತಿಯಿಂದ, ವಿಶ್ವಾಸವಿಟ್ಟು ಅಧಿಕಾರ ನೀಡಿದ್ದೀರಿ, ನಿಮ್ಮ ಋಣ ತೀರಿಸುತ್ತೇನೆ ಎಂದರು.

Leave a Reply

Your email address will not be published. Required fields are marked *

error: Content is protected !!