ಉದಯವಾಹಿನಿ, ಗೌರಿಬಿದನೂರು: ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾಗಿ ಅದರಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ನಗರಗೆರೆ ಹೋಬಳಿಯ ವಾಟದ ಹೊಸಹಳ್ಳಿ ಗ್ರಾಮದ ಬಳಿಯ ತಿರುವಿನಲ್ಲಿ ತಡರಾತ್ರಿ ನಡೆದಿದೆ.
ತಾಲೂಕಿನ ಬಿ.ತಾಂಡ ವಾಸಿ ಶ್ರೀಧರ್‌ ನಾಯಕ್‌ (28), ಚಿಕ್ಕಬಳ್ಳಾಪುರದ ಪೆರೆಸಂದ್ರದ ವೇಣುಗೋಪಾಲ್‌(38), ಬೆಲ್ಲಾಳಹಳ್ಳಿಯ ಮಂಜುನಾಥ್‌ (37) ಮೃತಪಟ್ಟವರು. ದಾವಣಗೆರೆ ನಿವಾಸಿ ಶಿವಕುಮಾರ್‌ (38) ಗಾಯಗೊಂಡಿದ್ದಾರೆ. ಇವರೆಲ್ಲರೂ ಬೆಸ್ಕಾಂ ನೌಕರರು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ತವ್ಯ ನಿಮಿತ್ತ ವೇಣುಗೋಪಾಲ್‌ ಅವರ ಬ್ರಿಜಾ ಕಾರಿನಲ್ಲಿ ನಗರಗೆರೆಗೆ ತೆರಳಿದ್ದು, ಗೌರಿಬಿದನೂರಿಗೆ ವಾಪಸ್‌ ಬರುವಾಗ ಈ ದುರಂತ ಸಂಭವಿಸಿದೆ.ಅಪಘಾತದ ರಭಸಕ್ಕೆ ಕಾರು ಹಳ್ಳಕ್ಕೆ ಉರುಳಿ ಬಿದ್ದು ಮರವೊಂದಕ್ಕೆ ಕಚ್ಚಿಕೊಂಡಿದೆ. ಅದರಲ್ಲಿದ್ದ ಮೂವರು ಚೆಲ್ಲಾಪಿಲ್ಲಿಯಾಗಿ ಹೊರಗೆ ಬಿದ್ದು ರೆಂಬೆಕೊಂಬೆಗಳಿಗೆ ಕಚ್ಚಿಕೊಂಡು ಮೃತಪಟ್ಟಿದ್ದರೆ, ಒಬ್ಬರು ಕಾರಿನಲ್ಲೇ ಸಿಲುಕಿದ್ದರು. ಮೃತರು ವಾಟದಹೊಸಹಳ್ಳಿ ಬೆಸ್ಕಾಂ ವಿಭಾಗದಲ್ಲಿ ಲೈನ್‌ಮೆನ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿರುವುದೇ ಈ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

 

Leave a Reply

Your email address will not be published. Required fields are marked *

error: Content is protected !!