ಉದಯವಾಹಿನಿ, ನಿವಾಸಪುರ: ಮುಂಗಾರು ಮಳೆ ಆರ್ಭಟಕ್ಕೆ ನಾಪತ್ತೆ ಆಗಿರುವ ಪುರಸಭೆ ಅಧಿಕಾರಿಗಳನ್ನು ಹುಡುಕಿಕೊಟ್ಟು ಒತ್ತುವರಿ ಆಗಿರುವ ರಾಜಕಾಲುವೆ ಚರಂಡಿ ತೆರೆವುಗೊಳಿಸಿ ಜನಸಾಮಾನ್ಯರ ಬದುಕು ಆರೋಗ್ಯವನ್ನು ರಕ್ಷಣೆ ಮಾಡಬೇಕೆಂದು ಜೂ.೧೩ ರಂದು ಕಸದ ಸಮೇತ ಪುರಸಬೆ ಮುತ್ತಿಗೆ ಹಾಕಲು ತಾಲ್ಲೂಕು ಕಚೇರಿ ಅವರಣದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.ಪ್ರತಿ ವರ್ಷ ಮುಂಗಾರು ಮಳೆ ಆರ್ಭಟಕ್ಕೆ ನಗರಾದ್ಯಂತ ಜನ ಸಾಮಾನ್ಯರ ಬದುಕು ಆರೋಗ್ಯ ಹದಗೆಟ್ಟಾಗ ತಾಲ್ಲೂಕಾಡಳಿತ ಹಾಗೂ ಪುರಸಭೆ ಅಧಿಕಾರಿಗಳಿಗೆ ಅವ್ಯವಸ್ಥೆಯ ಸಮಸ್ಯೆ ನೆನಪಿಗೆ ಬರುತ್ತದೆ. ನೆಪಮಾತ್ರಕ್ಕೆ ಸಮಸ್ಯೆಯಿರುವ ಜಾಗಗಳಿಗೆ ಬೇಟಿ ನೀಡಿ ಆನಂತರ ನಾಪತ್ತೆ ಆದರೆ ಮತ್ತೆ ಮುಂದಿನ ವರ್ಷ ಅಧಿಕಾರಿಗಳ ಮುಖ ಜನಸಾಮಾನ್ಯರಿಗೆ ತೋರಿಸುತ್ತಾರೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ಸರಿಪಡಿಸದ ಜನಪ್ರತಿನಿದಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಲಾಡ್ಯರು ರಾಜಕೀಯ ಬೆಂಬಲಿಗರು ರಾಜಕಾಲುವೆ ಹಾಗೂ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆಗಳು ನಿವೇಶನಗಳು ನಿರ್ಮಿಸಿಕೊಂಡು ಮಳೆ ನೀರು ಸರಾಗವಾಗಿ ಕಾಲುವೆಗಳ ಮುಖಾಂತರ ಕೆರೆಗಳಿಗೆ ಹರಿಯದೆ ಸುರಿಯುತ್ತಿರುವ ಮಳೆ ನೀರು ಬಡವರ ಮನೆಗಳಿಗೆ ಮತ್ತು ರೈತರ ತೋಟಗಳಿಗೆ ನುಗ್ಗಿ ಅವಾಂತರಗಳನ್ನು ಸೃಷ್ಠಿಸುತ್ತಿದ್ದರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ಭಯವೇಕೆ ಎಂದು ಪ್ರಶ್ನೆ ಮಾಡಿದರು. ತಾಲ್ಲೂಕಾದ್ಯಕ್ಷ ತೆರ್‍ನಹಳ್ಳಿ ಆಂಜಿನಪ್ಪ ಮಾತನಾಡಿ ನಗರಾದ್ಯಂತ ಪುರಸಭೆ ಅಧಿಕಾರಿಗಳ ನಿರ್ಲಕ್ಷದಿಂದ ಕಸವನ್ನು ತೆರೆವುಗೊಳಿಸದೆ ಬೇಜವಬ್ದಾರಿ ವರ್ತನೆಯಿಂದ ಸುರಿಯುತ್ತಿರುವ ಮಳೆ ನೀರಿನಲ್ಲಿ ಕಸಕಡ್ಡಿ ಬಡವರ ಮನೆಗಳಿಗೆ ಹರಿದು ಇತ್ತ ಬದುಕು ಇಲ್ಲದೆ ಅತ್ತ ಆರೋಗ್ಯವೂ ಇಲ್ಲದೆ ಸಾಂಕ್ರಾಮಿಕ ರೋಗಗಳ ಭಯದಲ್ಲಿ ಬಡವರ ಬದುಕು ಕತ್ತಲೆಯಲ್ಲಿ ಕಳೆಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!