ಉದಯವಾಹಿನಿ, ಬೀದರ: ನಗರದ ಡಾ. ತೋಂಟದ ಸಿದ್ಧಲಿಂಗ ಪ್ರೌಡ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವಿಶೇಷ ಸನ್ಮಾನ ಸಮಾರಂಭ ಜರುಗಿತು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಪೆÇ್ರ. ಉಮಾಕಾಂತ ರವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಮಾನವ ಜೀವಿಯ ಕರ್ತವ್ಯವಾಗಿದೆ. ಪರಿಸರದಲ್ಲಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮಾಲಿನ್ಯ, ಭೂಮಿ ಮಾಲಿನ್ಯವಾಗುವುದರಿಂದ ಜೀವ-ಜಂತು, ಪಕ್ಷಿ-ಪ್ರಾಣಿ ಮತ್ತು ಮಾನವ ಜೀವಿ ಬದುಕಲು ಕಷ್ಟಕರವಾಗಿದೆ. ಈ ಪ್ರಯುಕ್ತ ಪ್ರತಿಯೊಬ್ಬರು ಕನಿಷ್ಠ ಒಂದು ಸಸಿ ನೆಡುವುದರ ಮೂಲಕ ಪ್ರಕೃತಿಯಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿಸುವಂತೆ ಪರಿಶ್ರಮ ಮಾಡಬೇಕು. ಪ್ರಕೃತಿ ಮಾಲಿನ್ಯವಾಗದಂತೆ ಪ್ರತಿಯೊಬ್ಬರು ಗಿಡಗಳ ಸಂರಕ್ಷಣೆ ಮಾಡಿ ಜೀವ-ಜಂತು, ಪಕ್ಷಿ-ಪ್ರಾಣಿ ಮತ್ತು ಮಾನವ ಜೀವಿ ಸಂರಕ್ಷಣೆ ಮಾಡುವುದು ಅನಿವಾರ್ಯತೆ ಇದೆ.

ಸಮಾಜದಲ್ಲಿ “ಅಪ್ಪಿಕೋ-ಚಿಪೆÇ್ಕೀ” ಚಳುವಳಿಯ ನೇತಾರ ಸುಂದರಲಾಲ್ ಬಹುಗುಣ ಮತ್ತು ಸಾಲದ ಮರದ ತಿಮ್ಮಕ್ಕ ರವರ ಸೇವೆ ವಿಚಾರಗಳನ್ನು ಸಮಾಜದ ಜನರು ಅನುಸರಿಸಿಕೊಂಡು ಹಸಿರೇ ಉಸಿರಾಗಿ ವಿದ್ಯಾರ್ಥಿಗಳು ಗಿಡ ನೆಡುವುದರ ಮೂಲಕ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳುವುದು ಅನಿವಾರ್ಯತೆ ಇದೆ ಮತ್ತು ಪ್ರಕೃತಿಯಲ್ಲಿಯ ತಾಪಮಾನ ಕಡಿಮೆ ಮಾಡುವಲ್ಲಿ ಹೆಚ್ಚೆಚ್ಚು ಗಿಡಗಳನ್ನು ನೆಡಸುವುದರಿಂದ ಸಮಯಕ್ಕೆ ಸರಿಯಾಗಿ ಮಳೆ ಬೀಳುವುದು ಮತ್ತು ಬೆಳೆ ಸರಿಯಾಗಿ ಬರುವುದು ಎಂದು ಕರೆ ನೀಡಿದರು.

 

Leave a Reply

Your email address will not be published. Required fields are marked *

error: Content is protected !!