ಉದಯವಾಹಿನಿ, ಅಥಣಿ : ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟ ಅನ್ನಭಾಗ್ಯ ಯೋಜನೆಯಲ್ಲಿ ಮಕ್ಕಳ ಹಾಜರಾತಿಯನ್ನು ಹೆಚ್ಚಿಗೆ ತೋರಿಸಿ ಲಕ್ಷಾಂತರ ರೂಪಾಯಿ ಗೋಲ್ಮಾಲ್ ಮಾಡಿರುವ ಸಂಗತಿ ಖಿಳೇಗಾವಿ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬಸವೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಕೆಲವು ಸದಸ್ಯರು ನೀಡಿರುವ ದೂರಿನ ಆಧಾರದ ಮೇಲೆ ತಾಲೂಕಾ ಬಿಸಿಊಟ ಅನ್ನ ಭಾಗ್ಯ ಯೋಜನೆಯ ತಾಲೂಕ ನಿರ್ದೇಶಕ ಮಲ್ಲಿಕಾರ್ಜುನ ನಾಮದಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಬಿ ಮೋರಟಗಿ ಶುಕ್ರವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಬಿಸಿಊಟ ಯೋಜನೆ ಸೇರಿದಂತೆ ಇನ್ನಿತರ ವ್ಯವಹಾರಗಳಲ್ಲಿ ಭ್ರಷ್ಟಾಚಾರ ಮಾಡಿರುವುದು ಕಂಡು ಬಂದಿದೆ.
ಈ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಎಂಬತನಾಳ ಎಂಬವರು ಶಾಲಾ ಮಕ್ಕಳಿಗೆ ನೀಡಲಾಗುವ ಬಿಸಿ ಊಟ ಯೋಜನೆಯಲ್ಲಿ ಬೋಗಸ್ ಹಾಜರಾತಿಗಳನ್ನು ತೋರಿಸಿ ಲಕ್ಷಾಂತರ ರೂಪಾಯಿ ಗೋಲ್ಮಾಲ್ ಮಾಡಿರುವದು ಮೇಲ್ನೋಟಕ್ಕೆ ಕಂಡುಬಂದಿದ್ದು, ಆಡಳಿತ ಮಂಡಳಿಯವರ ಗಮನಕ್ಕೆ ತರದೆ ಸಂಸ್ಥೆಯ ಆದಾಯವನ್ನು ಲಪಟಾಯಿಸಿದ್ದಾನೆ ಎನ್ನಲಾಗಿದೆ.
ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜನ ಮೇಲೆ ಈ ದೂರುಗಳು ಬಂದ ಹಿನ್ನೆಲೆಯಲ್ಲಿ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಬಿಸಿಯೂಟ ಯೋಜನೆಯ ತಾಲೂಕಾ ನಿರ್ದೇಶಕರು ಜಂಟಿಯಾಗಿ ಪೆÇಲೀಸ್ ಭದ್ರತೆಯೊಂದಿಗೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಎಂಬತನಾಳ ಆಡಳಿತ ಮಂಡಳಿಯವರು ನೀಡಿರುವ ಮೌಖಿಕ ಆದೇಶದಂತೆ ವ್ಯವಹಾರ ಮಾಡಿರುವದಾಗಿ ಅಧಿಕಾರಿಗಳ ಮುಂದೆ ತಪೆÇ್ಪಪ್ಪಿಕೊಂಡಿದ್ದಾನೆ. ಒಟ್ಟಾರೆ ಆಡಳಿತ ಮಂಡಳಿಯ ಸದಸ್ಯರು ಮತ್ತು ಮುಖ್ಯೋಪಾಧ್ಯಾಯ ಇಬ್ಬರು ಸೇರಿಕೊಂಡು ಮೇಲ್ನೋಟಕ್ಕೆ ಶಾಲೆಯ ಬಿಸಿಯೂಟ ಯೋಜನೆಯಲ್ಲಿ ಅವ್ಯವಹಾರ ಕಂಡುಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು, ನಮ್ಮ ತನಿಕಾ ತಂಡ ಬಂದಾಗ ಸೂಕ್ತ ದಾಖಲಾತಿಗಳನ್ನು ಒದಗಿಸಿ ಸಹಕರಿಸಬೇಕು. ಆಡಳಿತ ಮಂಡಳಿಯ ಆರೋಪ ಮತ್ತು ಮುಖ್ಯೋಪಾಧ್ಯಾಯನ ಪ್ರತ್ಯಾರೋಪ ಆಲಿಸಿದ ಅಧಿಕಾರಿಗಳು ಒಂದು ವಾರದ ಒಳಗಾಗಿ ಸೂಕ್ತ ದಾಖಲಾತಿಗಳನ್ನ ಒದಗಿಸುವಂತೆ ಖಡಕ್ ನೀಡಿದ್ದಾರೆ.
