ಉದಯವಾಹಿನಿ, ಬೆಂಗಳೂರು: ಲಾಟರಿ ಬೆಳೆ ಎಂದು ಹೇಳಲಾಗುವ ಕೆಂಪು ಸುಂದರಿ ಟಮೊಟೋ ಬೆಲೆ ಮತ್ತೆ ಏರುತ್ತಿದ್ದು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ.ಕಳೆದ ಕೆಲ ತಿಂಗಳ ಹಿಂದೆ ಡಬ್ಬಲ್‌ ಸೆಂಚುರಿ ಭಾರಿಸಿ ಭಾರಿ ಸುದ್ದಿಯಾಗಿದ್ದ ಟಮೋಟೋ ಮತ್ತೆ ಸೆಂಚುರಿಯತ್ತ ಮುನ್ನುಗ್ಗುತ್ತಿದೆ, ಅಡುಗೆ ಮಾಡಲು ಯಾವ ತರಕಾರಿ ಇಲ್ಲದ್ದರೂ ಪರವಾಗಿಲ್ಲ ಒಂದೆ ಒಂದು ಟಮೋಟೋ ಇದ್ದರೆ ಸಾಕು ಅಂದಿನ ದಿನ ಕಳೆಯಬಹುದು ಅಷ್ಟರ ಮಟ್ಟಿಗೆ ಅಡುಗೆ ಮನೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದು ಕೊಂಡಿದೆ.
ಐಮೋಟೋ ಬೆಳೆದು ಶ್ರೀಮಂತರಾದವರು ಇದ್ದರೆ ಸಾಲದ ಸುಳಿಗೆ ಸಿಲುಕಿರುವವರ ಹಲವಾರು ನಿದರ್ಶನಗಳನ್ನು ಕಾಣಬಹುದಾಗಿದೆ. ಅದಕ್ಕೆ ಗ್ರಾಮಾಂತರ ಭಾಗದಲ್ಲಿ ಇದು ಲಾಟರಿ ಬೆಳೆ ಎಂದು ಹೇಳುತ್ತಾರೆ. ಬೆಳೆ ಕೈ ಹಿಡಿದರೆ ಅದೃಷ್ಟ ಒಲಿಯುತ್ತದೆ, ಇಲ್ಲದಿದ್ದರೆ ಕೆ.ಜಿ.ಗೆ 2 ರಿಂದ 5 ರೂ. ದರವಾಗಿ ರೋಡಿಗೆ ಸುರಿಯ ಬೇಕಾಗುತ್ತದೆ, ಬೆಲೆ ಯಾವಾಗ ಬರುತ್ತದೆ, ಯಾವಾಗ ಕಡಿಮೆಯಾಗುತ್ತದೆ ಎಂದು ಯಾರಿಂದಲೂ ಊಹಿಸಲಾಗದು. ಕಳೆದ ಕೆಲ ದಿನಗಳ ಹಿಂದೆ ಬರೋಬ್ಬರಿ ಸುಮಾರು ಎರಡು ತಿಂಗಳುಗಳ ಕಾಲ ಮೇಲೇರಿದ ಬೆಲೆ ಕೆಳಗೆ ಇಳಿದೇ ಇರಲಿಲ್ಲ. ಈ ಸಂದರ್ಭದಲ್ಲಿ ಬೆಳೆ ಬೆಳೆದಿದ್ದ ರೈತರು ಲಕ್ಷಾಧೀಶ್ವರರು ಹಾಗೂ ಕೋಟ್ಯಾಧಿಪತಿಗಳಾದ ಉದಾಹರಣೆಗಳನ್ನು ಕಾಣಬಹುದಾಗಿದೆ. ಕಳೆದ ಎರಡು ಮೂರು ತಿಂಗಳು ಬಿಸಿಲು ಜಾಸ್ತಿ ಇತ್ತು. ನೀರಿಲ್ಲದೆ ಇಳುವರಿ ಇರಲಿಲ್ಲ. ಈಗ ಕೆಲವು ಕಡೆ ಮಳೆಯಾಗುತ್ತಿದೆ ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಂದಿಲ್ಲ ಹಾಗಾಗಿ ಬೆಲೆ ಏರಿಕೆಯಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!