ಉದಯವಾಹಿನಿ, ಪಾವಗಡ: ವಿಷಯುಕ್ತ ನೀರು ಸೇವಿಸಿ ತಾಲ್ಲೂಕಿನ ರಾಜವಂತಿ ಗ್ರಾಮದ ಧರ್ಮಪ್ಪ ಅವರಿಗೆ ಸೇರಿದ 20 ಕುರಿಗಳು ಭಾನುವಾರ ಮೃತಪಟ್ಟಿವೆ. ಹೂವಿನ ಗಿಡಗಳಿಗೆ ಸಿಂಪಡಿಸಲೆಂದು ಇರಿಸಿದ್ದ ಕ್ರಿಮಿನಾಶಕ ಮಿಶ್ರಣ ಮಾಡಿದ್ದ ನೀರನ್ನು ಕುರಿಗಳು ಕುಡಿದಿವೆ. ಕುರಿಗಳು ಅಸ್ವಸ್ಥವಾಗಿರುವುದನ್ನು ಗಮನಿಸಿದ ಕುರಿಗಾಹಿ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ.
ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಕುರಿಗಳು ಸತ್ತಿವೆ. ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
