ಉದಯವಾಹಿನಿ, ತಾಳಿಕೋಟೆ: ತಾಲೂಕಿನ ನಾವದಗಿ ಗ್ರಾಮ ಒಳಗೊಂಡು ವಿವಿಧ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಕಲುಷಿತ ನೀರು ಸೇವಿಸಿ 40 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ಜರುಗಿದ್ದು ಕೆಲವು ಗ್ರಾಮಗಳಲ್ಲಿ ಬೋರವ್ಹೇಲ್ ನೀರು ಕಲುಷಿತವೆಂದು ಕಂಡುಬಂದರೆ ಇನ್ನೂ ಕೆಲವು ಗ್ರಾಮಗಳಲ್ಲಿ ಜೆಜೆಎಂ, ಭಾವಿ ನೀರು ಕಲುಷಿತವೆಂದು ಕಂಡುಬಂದಿದೆ.ತಾಲೂಕಿನಲ್ಲಿ ಕಲುಷಿತ ನೀರು ಸೇವನೆಯಿಂದ ಅತೀ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿ ಚಿಕೀತ್ಸೆ ಪಡೆದವರಲ್ಲಿ ನಾವದಗಿ ಗ್ರಾಮದವರಾಗಿದ್ದು ಎರಡನೇ ಹಂತದಲ್ಲಿ ಶಿವಪೂರ, ಮಿಣಜಗಿ, ಲಿಂಗದಳ್ಳಿ, ಕಲ್ಲದೇವನಹಳ್ಳಿ, ಮೂಲೇಶ್ವರ, ಲಕ್ಕುಂಡಿ, ಬ.ಸಾಲವಾಡಗಿ ಗ್ರಾಮದವರು ವಾಂತಿಬೇದಿಯಿಂದ ತಾಳಿಕೋಟೆ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಚಿಕೀತ್ಸೆ ಪಡೆದುಕೊಂಡಿದ್ದಾರೆ.
ನಾವದಗಿ ಗ್ರಾಮದ ಕಸ್ತೂರಿಬಾಯಿ ಬಡಿಗೇರ, ಕುಬೇರಪ್ಪ ಬಡಿಗೇರ, ಹುಲಗೆಪ್ಪ ಕುರೇಕನಾಳ, ಚೈತ್ರಾ ಮೊಡಲಗೇರಿ, ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಚಿಕೀತ್ಸೆ ಪಡೆದುಕೊಂಡಿದ್ದರೆ ಇನ್ನೂ 15 ರಿಂದ 20 ಜನರು ಖಾಸಗಿ ಆಸ್ಪತ್ರೆಯಲ್ಲಿ ಚಿಕೀತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಿಣಜಗಿ ಗ್ರಾಮದವರಾದ ಶಂಕ್ರಮ್ಮ ಮೇಲ್ದಾಪೂರ, ಈರಮ್ಮ ಗುಂಡಕನಾಳ, ಬಸವರಾಜ ಕೊಳೂರ, ಅವರು ಶಿವಪೂರ ಗ್ರಾಮದವರಾದ ಭಾಗ್ಯಾ ವಡಗೇರಿ, ಲಿಂಗದಳ್ಳಿ ಗ್ರಾಮದವರಾದ ಯಲ್ಲಪ್ಪ ನಾಯಕ, ಕಲ್ಲದೇವನಹಳ್ಳಿಯ ಪೂಜಾ ಮೇಲ್ದಾಪೂರ, ಮೈಲೇಶ್ವರ ಗ್ರಾಮದ ದಾನಮ್ಮ ಕಟ್ಟಿಮನಿ, ಲಕ್ಕುಂಡಿ ಗ್ರಾಮದವರಾದ ದೇವಮ್ಮ ಹರನಾಳ, ಬ.ಸಾಲವಾಡಗಿ ಗ್ರಾಮದವರಾದ ಹಣಮಮ್ಮ ಹಳ್ಳಿ ಅವರು ತಾಳಿಕೋಟೆ ಸಮೂದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕೀತ್ಸೆ ಪಡೆದುಕೊಂಡಿದ್ದರೆ.
