ಉದಯವಾಹಿನಿ, ಪಾಂಡವಪುರ: ವಿಶ್ವೇಶ್ವರಯ್ಯ ನಾಲೆಗೆ(ವಿ.ಸಿ) ಪಟ್ಟಣದ ಚರಂಡಿ ನೀರು ಸೇರುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಮಧ್ಯೆ ಭಾಗದಲ್ಲಿ ಹರಿಯುವ ವಿ.ಸಿ.ನಾಲಾ ಏರಿ ಮೇಲೆ ಜಮಾವಣೆಗೊಂಡ ಪ್ರತಿಭಟನಾಕಾರರು ಕಾವೇರಿ ನೀರಾವರಿ ನಿಗಮ ಮತ್ತು ಪುರಸಭೆ ಅಧಿಕಾರಿ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಪಟ್ಟಣದ ಹೌಸಿಂಗ್ ಬೋ‌ರ್ಡ್ ಕಾಲೋನಿ, ಶಾಂತಿನಗರ, ಮಹಾಂಕಾಳೇಶ್ವರಿ ಬಡಾವಣೆ, ಮಹಾತ್ಮಗಾಂಧಿನಗರ ನಿವಾಸಿಗಳು ಬಳಸುವ ಮಲಿನ ನೀರು ಹಾಗೂ ಒಳಚರಂಡಿ ವ್ಯವಸ್ಥೆಯ ತ್ಯಾಜ್ಯ ನೀರು ನಾಲೆಗೆ ಹರಿಯದಂತೆ ಕ್ರಮವಹಿಸಬೇಕೆಂದು ಮನವಿ ಮಾಡಲಾಗಿದೆ. ಆದರೆ, ಇದುವರೆಗೂ ಯಾವುದೇ ಕ್ರಮವಹಿಸಿಲ್ಲ, ಪ್ರತಿ ಬಾರಿ ಮನವಿ ಮಾಡಿದಾಗಲೂ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ಅಗತ್ಯ ಕ್ರಮವಹಿಸಿಲ್ಲ’ ಎಂದು ದೂರಿದರು. ಬಿಜೆಪಿ ಮುಖಂಡ ಎಚ್‌.ಎನ್.ಮಂಜುನಾಥ್ ಮಾತನಾಡಿ, ‘ಮಹತ್ಮಾಗಾಂಧಿ ನಗರ ಮತ್ತು ಹನುಮಂತನಗರದ ಬಳಿ ಹಂದಿ ಸಾಕಾಣಿಕೆ ಮಾಡಲಾಗುತ್ತಿದ್ದು, ಇದರ ತ್ಯಾಜ್ಯವೂ ನಾಲೆಗೆ ಸೇರುತ್ತಿದೆ. ಇದರಿಂದ ನಾಲಾ ಕೆಳಭಾಗದ ರೈತರು ಮತ್ತು ನಿವಾಸಿಗಳು ನೀರನ್ನು ಬಳಸಲು ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *

error: Content is protected !!