ಉದಯವಾಹಿನಿ, ಚಿತ್ರದುರ್ಗ : ನಗರದಲ್ಲಿ ಹೊಸ ಹೊಸ ಬಸ್ಸ್ ಸ್ಟಾ÷್ಯಂಡ್ ಕಟ್ಟಿಸಿದ್ದಾರೆ, ಆದರೆ ಸಿಟಿ ಬಸ್ಸಿಲ್ಲದೆ ಖಾಲಿ ಕುಳಿತಿವೆ. ಗಾಡಿ ಪಾರ್ಕಿಂಗ್‌ಗೆ, ನಾಯಿಗಳ ಮಲಗುವಿಕೆಗೆ ಬಳಕೆಯಾಗುತ್ತಿವೆ. ಅದೇ ದಾವಣಗೆರೆ ಬಾಡಾ ಕ್ರಾಸ್ ಬಳಿ ನೂರಾರು ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವೃದ್ದರು, ವಿಶೇಷ ಚೇತನರು ರಸ್ತೆ ಬದಿಯಲ್ಲಿ, ಬಿಸಿಲಿನಲ್ಲಿ, ಮಳೆಯಲ್ಲಿ ನಿಂತು ಬಸ್ಸಿಗಾಗಿ ಕಾಯುವರಿಗೆ ಒಂದು ಬಸ್ಸ್ ಸ್ಟಾ÷್ಯಂಡ್ ಕಲ್ಪಿಸಿಲ್ಲ, ಇದು ಎಂತಹ ವಿಚಿತ್ರ ನೆಡೆ ಎಂದು ಎರಡು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಡಾ. ಹೆಚ್.ಕೆ.ಎಸ್.ಸ್ವಾಮಿಯವರು ಪತ್ರಿಕೆಯ ಮುಖಾಂತರ ಪ್ರಯತ್ನಿಸಿದ್ದಾರೆ.ಚಿತ್ರದುರ್ಗದ ಬಸ್‌ಸ್ಟಾಂಡ್ ಮುಂದೆ ಈಗ ಗಾಡಿಗಳನ್ನು ಪಾರ್ಕಿಂಗ್ ಮಾಡಲು, ಶೆಡ್‌ಗಳ ಕೆಳಗಡೆ ನಾಯಿಗಳು ವಿಶ್ರಮಿಸಿಕೊಳ್ಳಲು ಬಳಕೆಯಾಗುತ್ತಿದೆ.. ಇಂತಹ ಹೊಸದಾದÀ ಬಸ್ ಸ್ಟಾ÷್ಯಂಡು ಈ ರೀತಿ ವ್ಯರ್ಥವಾಗುವುದನ್ನು ನೋಡಿ, ಲಕ್ಷಾಂತರ ರೂಪಾಯಿ ಸಾರ್ವಜನಿಕ ಹಣ ಖರ್ಚು ಮಾಡಿ, ನಗರದಲ್ಲಿ 4-5 ಬಸ್ ಸ್ಟಾ÷್ಯಂಡ್‌ಗಳನ್ನು ಕಟ್ಟಿ, ಬಸ್ಸುಗಳನ್ನೇ ಬಿಡದೆ ಬೇಜವಾಬ್ದಾರಿಯಿಂದ ನೆಡೆದುಕೊಂಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.ಅಕ್ಕ ಪಕ್ಕದ ಜಿಲ್ಲೆಗಳನ್ನು ನೋಡಿ ಒಂದು ಜಿಲ್ಲೆಯನ್ನು ಅಭಿವೃದ್ಧಿಗೊಳಿಸುವುದು ಸಾಮಾನ್ಯ ಜ್ಞಾನ, ಪಕ್ಕದ ಜಿಲ್ಲೆ ದಾವಣಗೆರೆಯಲ್ಲಿ ಸಾಕಷ್ಟು ಸಿಟಿ ಬಸ್ಸುಗಳಿಗೆ ನಂಬರ್ ಸಮೇತ ಹಾಕಿ, ಎಲ್ಲಾ ಸ್ಥಳಗಳಿಗೂ ಸಹ, ಅರ್ಧ ಗಂಟೆಗೊಮ್ಮೆ ಸಿಟಿ ಬಸ್ಸು ಓಡಾಡುವುದನ್ನು ನೋಡಬಹುದು. ಅದೇ ರೀತಿ ನಮ್ಮ ಜಿಲ್ಲೆಯಲ್ಲೂ ಸಹ ಕನಸು ಕಾಣುವ ಭಾಗ್ಯ ಜನರಿಗೆ ಇಲ್ಲವಾಗಿದೆ. ಚಿತ್ರದುರ್ಗ ಸಹ ವಿಸ್ತಾರವಾಗಿ ಬೆಳೆಯುತ್ತಿದೆ, ಒಂದು ಕಡೆ ಮಠದಿಂದ ಜೋಗಿಮಟ್ಟಿ ರಸ್ತೆ, ಹೊಳಲ್ಕೆರೆ ರಸ್ತೆ, ಚಳ್ಳಕೆರೆ ರಸ್ತೆ, ಬೇಕಾದಷ್ಟು ವಿಭಾಗಗಳಾಗಿ ಚಿತ್ರದುರ್ಗವನ್ನು ಅಭಿವೃದ್ಧಿಗೊಳಿಸಬಹುದು. ನಾಲ್ಕೆöÊದು ದಿಕ್ಕುಗಳಿಗೆ ನಾಲ್ಕೆöÊದು ಬಸ್ಸುಗಳನ್ನು ಬಿಟ್ಟು ಓಡಾಡಿಸಿ ಜನರನ್ನ ಸಾಗಿಸಬೇಕು ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!