ಉದಯವಾಹಿನಿ, ಚಿಕ್ಕೋಡಿ: ಕಾರಹುಣ್ಣಿಮೆ ನಿಮಿತ್ಯ ಎತ್ತುಗಳ ಬೆದರಿಸುವ ವೇಳೆಯಲ್ಲಿ ಜನರನ್ನು ನೋಡಿದ ಎತ್ತು ಬೆದರಿ ಜನರ ಮಧ್ಯೆ ಓಡಿ ಹೋಗಿದೆ. ಇದರಿಂದ ಭಾರಿ ಅನಾಹುತ ತಪ್ಪಿದ ಘಟನೆ ಚಿಕ್ಕೋಡಿ ನಗರದಲ್ಲಿ ನಡೆದಿದೆ.
ಕಾರಹುಣ್ಣಿಮೆ ನಿಮಿತ್ಯ ರೈತರು ಎತ್ತುಗಳ ಮೈ ತೋಳೆದು ಬಣ್ಣ ಹಚ್ಚಿ ಪೂಜೆ ಮಾಡಿದ ಬಳಿಕ ಎತ್ತುಗಳನ್ನು ನಗರದ ವಿವಿಧ ಬಡಾವಣೆಗಳಲ್ಲಿ ಓಡಿಸಿಕೊಂಡು ಕೊನೆಗೆ ಕರಿ ಹರಿಯುತ್ತಾರೆ.
ಚಿಕ್ಕೋಡಿ ನಗರದ ವಾಡಗಲ್ಲಿಯ ಹತ್ತಿರ ಕರಿ ಹರಿಯುವ ವೇಳೆಯಲ್ಲಿ ಜನರನ್ನು ನೋಡಿದ ಎತ್ತು ಬೆದರಿ ಜನರ ಮಧ್ಯೆದಲ್ಲಿ ಓಡಿ ಹೋಗಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ. ಎತ್ತು ಓಡಿದ ದೃಶ್ಯ ನೋಡಿದರೆ ದೊಡ್ಡ ಅನಾಹುತ ಆಗಿರಬಹುದು ಎಂಬುದು ತಿಳಿದು ಬರುತ್ತಿದೆ.ಆದರೆ ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ. ಜನರನ್ನು ನೋಡಿ ಬೆದರಿದ ಎತ್ತಿನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
