ಉದಯವಾಹಿನಿ, ಮೈಸೂರು: ರೋಗಗಳು ಬರುವ ಮುನ್ನ ಎಚ್ಚರವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಬಡವರಿಗೆ ವರದಾನವಾಗಲಿದೆ ಎಂದು ತ್ರಿವೇಣಿ ಗೆಳೆಯರ ಬಳಗದ ಅಧ್ಯಕ್ಷ ಬಿ ಆನಂದ್ ಹೇಳಿದರು.
ನಗರದ ಶಕ್ತಿನಗರದ ವಾರ್ಡ್ ನಂಬರ್ 35ರ ತ್ರಿವೇಣಿ ವೃತ್ತದ ಕೆಎಸ್‍ಐಬಿ ಕಾಲೋನಿಯಲ್ಲಿ ತ್ರಿವೇಣಿ ಗೆಳೆಯರ ಬಳಗದ 30ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಸ್ಪರ್ಶ ಆಸ್ಪತ್ರೆ ಹಾಗೂ ಜೀವದಾರ ರಫ್ತ ನಿಧಿ ಕೇಂದ್ರದ ಸಹಾಯಕ ದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ, ಕಣ್ಣಿನ ತಪಾಸಣೆ ಶಿಬಿರ, ದಂತ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯವಾಗಿದ್ದರೆ, ಸುಖವಾಗಿ ಬಾಲಬಹುದು, ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚು ಮಾಡಬೇಕಾಗುತ್ತದೆ, ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಜೀವದಾರ ರತ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಆರೋಗ್ಯ ಶಿಬರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ, ಇಂತಹ ಶಿಬಿರಗಳು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜಿಸಬೇಕು ಎಂದು ತಿಳಿಸಿದರು.

300ಕ್ಕೂ ಹೆಚ್ಚು ಜನ ಶಿಬಿರದಲ್ಲಿ ರಕ್ತದೊತ್ತಡ, ದಂತ, ಮಧುಮೇಹ, ಕಣ್ಣಿನ ತಪಾಸಣೆ ಸಿಬಿರವನ್ನು ಸದುಪಯೋಗಪಡಿಸಿಕೊಂಡರು. ಅಗತ್ಯ ಇರುವ ರೋಗಿಗಳಿಗೆ ಉಚಿತ ಔಷಧ ವಿತರಣೆ ಮಾಡಲಾಯಿತು. ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 50 ಜನ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ಮುತ್ತು ದೇವಸ್ಥಾನದ ಅಧ್ಯಕ್ಷರು ಗಣೇಶ್ ಬಾಲಾಜಿ, ತ್ರಿವೇಣಿ ಗೆಳೆಯರ ಬಳಗದ ಅಧ್ಯಕ್ಷರಾದ ಬಿ ಆನಂದ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕಲ್ಯಾಣೇಶ್ವರ ದೇವಸ್ಥಾನದ ಗೌರವಾಧ್ಯಕ್ಷರು ಪ್ರಭಣ್ಣ, ಶಕ್ತಿನಗರ ಹಿತರಕ್ಷಣೆ ಸಮಿತಿಯ ಮಾಜಿ ಅಧ್ಯಕ್ಷರು ವೆಂಕಟೇಶ್, ಪಂಚವಟ್ಟಿಹೋಟೆಲ್ ಮಾಲೀಕರು ಸತೀಶ್, ಬಿಜೆಪಿ ಮುಖಂಡರಾದಂತ ಮಣಿರತ್ನಂ, ನಾಗರಾಜ್, ಶ್ರಿಕಂಠ, ಮೂರ್ತಿ . ಬಿಜೆಪಿ ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಹಿತ್, ವಾರ್ಡ್ ಅಧ್ಯಕ್ಷರು ಶಿವು ಬಸವರಾಜ್ ,ಜನಾರ್ಧನ್ ಸ್ವಾಮಿ .ಕಿರಣ, ಮಹೇಶ್ ,ಶಾಮಲಾ ಗೌಡ್ರು, ಶೈಲಜಮ್ಮ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!