ಉದಯವಾಹಿನಿ, ಬೆಂಗಳೂರು: ಚಂದ್ರಾಲೇಔಟ್ ನ ಹೈಪರ್ ವಿಲ್ಲೇಜ್ ಪಾರ್ಕ್ ಬಳಿ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು,ಅವರ ವಾರಸುದಾರರು ಪತ್ತೆಯಾಗಿಲ್ಲ. ಕಳೆದ ಮೇ.೧೮ ರಂದು ಹೈಪರ್ ವಿಲ್ಲೇಜ್ ಪಾರ್ಕ್ ಬಳಿ ಅಸ್ವಸ್ಥರಾಗಿ ಬಿದ್ದಿದ್ದ ಸುಮಾರು ೬೦ ವರ್ಷದ ಮಹಿಳೆಯನ್ನು ಬನ್ನೇರುಘಟ್ಟದ
ಪೊಸಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಆಕೆ ಜೂನ್ ೧೮ರಂದು ಮಧ್ಯಾಹ್ನ ೧೨.೫೦ರ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.
ಅಲ್ಲಿಂದ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.
ಸರಿಯಾಗಿ ಮಾತನಾಡಲು ಬರದೆ ಅವರು ತೊದಲು ತೊದಲಾಗಿ ಚಂದ್ರಿಕಾ ಎಂದು ತಿಳಿಸಿದ್ದು,೫ ಅಡಿ ಎತ್ತರ,ಸಾಧಾರಣ ಮೈಕಟ್ಟು ಹೊಂದಿರುವ ಅವರ ವಾರಸುದಾರರು ಯಾರೂದರೂ ಇದ್ದರೆ ಇಲ್ಲವೇ ಮಹಿಳೆಯ ಬಗ್ಗೆ ಮಾಹಿತಿಯಿದ್ದರೆ ಚಂದ್ರಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ೯೪೮೦೮೦೧೭೨೨ ಇಲ್ಲವೇ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ ೧೧೨ ಗೆ ತಿಳಿಸಲು ಕೋರಲಾಗಿದೆ.
