ಉದಯವಾಹಿನಿ, ಬೆಂಗಳೂರು: ತಾವು ಸಾಕಿರುವ ಪ್ರಾಣಿಗಳನ್ನು ಕೆರೆಯೊಳಗೆ ಬಿಡಬೇಡಿ ಎಂದುಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಾನುವಾರು ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ, ಅನೇಕರು ತಮ್ಮ ಜಾನುವಾರುಗಳನ್ನು ಕೆರೆಯ ಗಡಿಗಳಲ್ಲಿ ಮೇಯಲು ಬಿಡುವುದನ್ನು ಮುಂದುವರೆಸಿದ್ದಾರೆ.ಈಗ ಅಂತಹ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಮಹದೇವಪುರ ವಲಯದ ಕಾರ್ಯಪಾಲಕ ಅಭಿಯಂತರ (ಕೆರೆಗಳ) ಭೂಪ್ರದಾ ಮಾತನಾಡಿ, ವಿಜ್ಞಾನನಗರ ವಾರ್ಡ್‌ನಲ್ಲಿ ರಾತ್ರಿ ವೇಳೆ ವಿಭೂತಿಪುರ ಕೆರೆಗೆ ಅಕ್ರಮ ಪ್ರವೇಶ ಮಾಡಲು ಕಿಡಿಗೇಡಿಗಳು ಬೇಲಿ ಹಾಳು ಮಾಡಿದ್ದು, ಈಗ ಇದರ ಲಾಭ ಪಡೆದು ದನಗಳ ಮಾಲೀಕರು ಹತ್ತಾರು ಜಾನುವಾರುಗಳನ್ನು ಮುಂಜಾನೆಯೆ ಕೆರೆಗೆ ಬಿಡುತ್ತಿದ್ದಾರೆ.
ನಾವು ರವಿ ಎಂಬ ದನದ ಮಾಲೀಕನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದೆವು. ಎಫ್‌ಐಆರ್ ದಾಖಲಿಸುವ ಬದಲು ಎಚ್‌ಎಎಲ್ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದರು, ಆದರೆ ಕೆಲವೇ ದಿನಗಳಲ್ಲಿ ಜಾನುವಾರುಗಳನ್ನು ಕೆರೆಗೆ ಬಿಟಿದ್ದಾರೆ ಎಂದು ತಿಳಿಸಿದ್ದಾರೆ.
