ಉದಯವಾಹಿನಿ, ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ಕೇರಳದ ವಯನಾಡು, ಕೊಡಗು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಬಿದ್ದ ಮಳೆಯಿಂದಾಗಿ ಪ್ರಮುಖ ಜಲಾಶಯಗಳ ನೀರಿನ ಒಳ ಹರಿವು ಗಣನೀಯವಾಗಿ ಹೆಚ್ಚಾಗಿದೆ. ಶೇ. 3ರಷ್ಟು ನೀರಿನ ಸಂಗ್ರಹ ಹೆಚ್ಚಾಗಿದೆ.
ಅಂದರೆ, ಸುಮಾರು 18 ಟಿಎಂಸಿ ಅಡಿಯಷ್ಟು ನೀರು ಜಲಾಶಯಗಳಿಗೆ ಹರಿದು ಬಂದಿದೆ.
ಕೇರಳ, ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಏರಿಕೆಯಾಗಿದ್ದ ಒಳಹರಿವಿನ ಪ್ರಮಾಣ ನಾಳೆಯಿಂದ ಇಳಿಮುಖವಾಗುವ ಸಾಧ್ಯತೆ ಹೆಚ್ಚಾಗಿದೆ.
ಕರ್ನಾಟಕ ರಾಜ್ಯ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ಶೇ. 24ರಷ್ಟು ನೀರು ಸಂಗ್ರಹವಾಗಿದೆ. ಅಂದರೆ, 217.83 ಟಿಎಂಸಿ ಅಡಿ ನೀರು ಜಲಾಶಯಗಳಲ್ಲಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 171.98 ಅಡಿ ನೀರಿತ್ತು. ಕಳೆದ ವರ್ಷಕ್ಕಿಂತ ಸುಮಾರು 46 ಟಿಎಂಸಿಯಷ್ಟು ಹೆಚ್ಚುವರಿ ನೀರು ಸಂಗ್ರಹವಾಗಿದೆ.
ಕಾವೇರಿ ಜಲಾನಯನ ಭಾಗದ ಹಾರಂಗಿ, ಹೇಮಾವತಿ, ಕೆಆರ್‌ಎಸ್‌‍ ಹಾಗೂ ಕಬಿನಿ ಜಲಾಶಯಗಳಿಗೆ ಕಳೆದ ಮೂರು ದಿನಗಳಿಂದ ಒಳಹರಿವು ಹೆಚ್ಚಳವಾಗಿದೆ. ಈ ನಾಲ್ಕು ಜಲಾಶಯಗಳಿಂದ ಒಟ್ಟು 43 ಸಾವಿರ ಕ್ಯುಸೆಕ್ಸ್ ಗೂ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ.

ಹಾರಂಗಿ ಜಲಾಶಯಕ್ಕೆ ಒಂದೂವರೆ ಸಾವಿರ ಕ್ಯುಸೆಕ್ಸ್ ಗೂ ಅಧಿಕ ನೀರು ಬರುತ್ತಿದೆ. ಹೇಮಾವತಿ ಜಲಾಶಯಕ್ಕೆ 5 ಸಾವಿರ ಕ್ಯುಸೆಕ್‌್ಸಗೂ ಹೆಚ್ಚು, ಕೆಆರ್‌ಎಸ್‌‍ ಜಲಾಶಯಕ್ಕೆ 18 ಸಾವಿರ ಕ್ಯುಸೆಕ್‌್ಸಗೂ ಅಧಿಕ ಹಾಗೂ ಕಬಿನಿ ಜಲಾಶಯಕ್ಕೆ 17 ಸಾವಿರ ಕ್ಯುಸೆಕ್‌್ಸಗೂ ಅಧಿಕ ಪ್ರಮಾಣದ ಒಳಹರಿವಿದೆ.
ನಿನ್ನೆ 20 ಸಾವಿರ ಕ್ಯುಸೆಕ್ಸ್ ಗಿಂತ ಹೆಚ್ಚಿದ್ದ ಕಬಿನಿ ಜಲಾಶಯದ ಒಳಹರಿವು ಇಂದು 17 ಸಾವಿರ ಕ್ಯುಸೆಕ್‌್ಸಗೆ ಇಳಿಕೆಯಾಗಿದೆ. ಶೇ.73ರಷ್ಟು ನೀರು ಸಂಗ್ರಹವಾಗಿದೆ. 19.52 ಟಿಎಂಸಿ ಸಾಮರ್ಥ್ಯದ ಈ ಜಲಾಶಯದಲ್ಲಿ ಪ್ರಸ್ತುತ 14.31 ಟಿಎಂಸಿಯಷ್ಟು ನೀರಿದೆ.

Leave a Reply

Your email address will not be published. Required fields are marked *

error: Content is protected !!