ಉದಯವಾಹಿನಿ, ಕಲಬುರಗಿ: ಮಾದಕ ವಸ್ತುಗಳ ವ್ಯಸನ ಮನುಷ್ಯನ ಕ್ರಿಯಾಶೀಲ ಅಲೋಚನಾ ಕ್ರಮವನ್ನೆ ಸಂಕುಚಿತಗೊಳಿಸಿ ಅವನ ಸರ್ವತೋಮುಖ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಆದರಲ್ಲೂ ಹದಿಹರೆಯದ ವಯಸ್ಸಿನಲ್ಲಿ ಮಾದಕ ವಸ್ತುಗಳ ಸೇವನೆ ಅತ್ಯಂತಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ, ವ್ಯಸನಕ್ಕೆ ಒಳಗಾದ ವ್ಯಕ್ತಿ ಸಾಮಾಜಿಕವಾಗಿ, ಆರ್ಥಿಕವಾಗಿ, ಮಾನಸಿಕವಾಗಿ ಮತ್ತುಶೈಕ್ಷಣಿಕವಾಗಿಯಾವುದೇ ಸ್ಥಿತಿಯನ್ನು ಎದುರಿಸಲಾರದ ಸ್ಥಿತಿಯನ್ನು ತಲುಪುತ್ತಾನೆ. ಇಂದುಯುವತಲೆಮಾರುಎಚ್ಚೆತ್ತುಕೊಂಡುಅಂತಹ ಚಟುವಟಿಕೆಗಳಿಂದ ದೂರ ಉಳಿಯಬೇಕೆಂಬ ಕಿವಿಮಾತನ್ನು ವಿದ್ಯಾರ್ಥಿ ಮತ್ತುಯುವ ಸಮುದಾಯಕ್ಕೆಕಡಗಂಚಿಯಲ್ಲಿ ಆಯೋಜಿಸಿದ್ದಇನ್ಸ್‍ಟಿಟ್ಯೂಟ್ ಫಾರ್ ಸೋಷಿಯಲ್ ವರ್ಕರ್ಸ್ ಫಾರ್‍ಆ್ಯಕ್ಷನ್‍ರೀಸರ್ಚ್(ರಿ), ಮೈಸೂರು, ಸಾಯಿಪ್ರತಾಪ ಕಲಾ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯ, ಕಡಗಂಚಿಮತ್ತುಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ನೌಕರರಕ್ಷೇಮಾಭಿವೃದ್ಧಿ ಸಂಘ(ರಿ),ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಇವರ ಸಹಯೋಗದಲ್ಲಿ”ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಜನಜಾಗೃತಿಕಾರ್ಯಕ್ರಮ”26 ಜೂನ್ 2024 ರಿಂದ ಸಪ್ತಾಹಘೋಷವಾಕ್ಯ: ಸಾಕ್ಷಿಗಳು ಸ್ಪಷ್ಟವಾಗಿವೆ: ತಡೆಗಟ್ಟುವುದನ್ನು ಪ್ರೋತ್ಸಾಹಿಸೋಣಕಾರ್ಯಕ್ರಮದಲ್ಲಿಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕಡಾ.ಕಿರಣ್ ಎಂ.ಗಾಜನೂರುಕಾರ್ಯಕ್ರಮದಉದ್ಘಾಟನೆಯನ್ನು ನೆರವೇರಿಸಿ ಸಲಹೆಯನ್ನುನೀಡಿದರು.
ಅಂತರರಾಷ್ಟ್ರೀಯ ಮಾದಕವಸ್ತು ಸಮಸ್ಯೆಯು ಲಕ್ಷಾಂತರಜನರಜೀವನದ ಮೇಲೆ ಪರಿಣಾಮ ಬೀರುವ ಸಂಕೀರ್ಣ ಸಮಸ್ಯೆಯಾಗಿದೆ. ಮಾದಕ ದ್ರವ್ಯಗಳ ಪರಿಣಾಮಗಳು ವ್ಯಾಪಕ ಮತ್ತು ಬಹುಮುಖಿಯಾಗಿದ್ದು, ಮಾದಕವಸ್ತು ಬಳಕೆಯ ಅಸ್ವಸ್ಥತೆ ಹೊಂದಿರುವಜನರಿಂದ ಹಿಡಿದು ಮಾದಕವಸ್ತು ಕಳ್ಳಸಾಗಣೆ ಮತ್ತು ಸಂಘಟಿತಅಪರಾಧದಿಂದಉಂಟಾಗುವ ಪರಿಣಾಮಗಳೊಂದಿಗೆ ವ್ಯವಹರಿಸುವ ಸಮುದಾಯಗಳವರೆಗೆ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ವೈಜ್ಞಾನಿಕವಾಗಿ ಬೆಂಬಲಿತ, ತಡೆಗಟ್ಟುವಿಕೆ ಮತ್ತುಚಿಕಿತ್ಸೆ-ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯಎಂದುಕರ್ನಾಟಕಕೇಂದ್ರೀಯ ವಿಶ್ವವಿದ್ಯಾನಿಲಯದ, ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾದ್ಯಾಪಕರಾದಡಾ.ಎಂ ಶಿವಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಡಾ.ಡಿ.ಶ್ರೀನಿವಾಸ ಮಣಗಳ್ಳಿ, ಸಲಹೆಗಾರ ಮಂಡಳಿ ಸದಸ್ಯರು(ISWಂಖ,ಸ್ವಯಂ ಸೇವಾ ಸಂಸ್ಥೆ), ಮೈಸೂರುಹಾಗೂಸಹಾಯಕ ಪ್ರಾದ್ಯಾಪಕರುಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯ, ಇವರುಈ ವರ್ಷದಜೂನ್ 26ರಂದು ವಿಶ್ವದಾದ್ಯಂತಡ್ರಗ್‍ದುರುಪಯೋಗ ಮತ್ತುಅಕ್ರಮ ಸಾಗಣೆ ವಿರುದ್ಧ 37ನೇ ಅಂತರರಾಷ್ಟ್ರೀಯ ದಿನವನ್ನುಆಚರಿಸಲಾಗುತ್ತದೆ. 1987ರಿಂದ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮಾದಕ ವ್ಯಸನದಿಂದ ಮುಕ್ತವಾದಜಗತ್ತಿಗೆ ಸಹಕರಿಸಲುತಮ್ಮ ಸಮರ್ಪಣೆಯನ್ನು ಪ್ರದರ್ಶಿಸಲು ಈ ದಿನವನ್ನು ಸ್ಮರಿಸುತ್ತಿವೆ.

Leave a Reply

Your email address will not be published. Required fields are marked *

error: Content is protected !!