ಉದಯವಾಹಿನಿ, ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನದಿಂದ 2020ರಲ್ಲೇ ಕೂಲ್‌ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಅವರು ನಿವೃತ್ತಿ ಘೋಷಿಸಿದ್ದರೂ, ಅವರ ಅಭಿಮಾನಿಗಳ ಅಭಿಮಾನಕ್ಕೇನೂ ಕಡಿಮೆ ಆಗಿಲ್ಲ. ಭಾರತ ತಂಡಕ್ಕೆ ಸಾಕಷ್ಟು ಐಸಿಸಿ ಟ್ರೋಫಿ ಹಾಗೂ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್‌್ಸ ತಂಡಕ್ಕೆ 5 ಬಾರಿ ಚಾಂಪಿಯನ್‌ ಪಟ್ಟ ದಕ್ಕಿಸಿಕೊಟ್ಟಿರುವ ಎಂ.ಎಸ್‌‍.ಧೋನಿ ಅವರು ಇಂದು ತಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ತಮ ಮೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ದೇಶದ ಹಲವು ಕಡೆ ಅಭಿಮಾನಿಗಳು ಬಲು ಅದ್ದೂರಿಯಾಗಿ ಆಚರಿಸಿದ್ದಾರೆ.
ಈ ನಡುವೆ ಆಂಧ್ರಪ್ರದೇಶದ ನಂದಿ ಗ್ರಾಮದಲ್ಲಿ ಕಳೆದ ವರ್ಷ ಅಭಿಮಾನಿಗಳು 77 ಅಡಿ ಎತ್ತರದ ಕಟೌಟ್‌ ನಿರ್ಮಿಸುವ ಮೂಲಕ ಮಹೇಂದ್ರ ಸಿಂಗ್‌ ಧೋನಿ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ 100 ಅಡಿಯ ಕಟೌಟ್‌ ನಿರ್ಮಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.ಚಿತ್ರರಂಗದ ಖ್ಯಾತ ಕಲಾವಿದರಾದ ಅಮಿತಾಬ್‌ಬಚ್ಚನ್‌, ರಜನಿಕಾಂತ್‌ ಸೇರಿದಂತೆ ಹಲವು ನಟರುಗಳ ಸಿನಿಮಾಗಳು ಬಿಡುಗಡೆಯಾದಾಗ ಅವರ ಅಭಿಮಾನಿಗಳು 100 ಅಥವಾ ಅದಕ್ಕಿಂತಲೂ ಹೆಚ್ಚು ಅಡಿಯ ಕಟೌಟ್‌ಗಳನ್ನು ಚಿತ್ರ ಬಿಡುಗಡೆಯಾದ ಚಿತ್ರಮಂದಿರಗಳ ಮುಂದೆ ಸಂಭ್ರಮಾಚರಣೆ ಮಾಡಿರುವ ನಿದರ್ಶನಗಳು ಸಾಕಷ್ಟು ಇವೆ.

Leave a Reply

Your email address will not be published. Required fields are marked *

error: Content is protected !!