ಉದಯವಾಹಿನಿ, ಬೆಂಗಳೂರು: ಅಧಿಕಾರಿಗಳ ಉದಾಸೀನದಿಂದ ರಸ್ತೆ ಅಪಘಾತಗಳಲ್ಲಿ ಜನರ ಅಮೂಲ್ಯ ಪ್ರಾಣ ಹೋದರೆ ಸಹಿಸುವುದಿಲ್ಲ, ನೀವು ರಸ್ತೆಗಿಳಿದು ಸುರಕ್ಷತಾ ಕ್ರಮಗಳನ್ನು ಪರೀಕ್ಷಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ವಿಧಾನಸೌಧದಲ್ಲಿಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಎರಡನೇ ದಿನದ ಸಭೆಯಲ್ಲಿ ಮಾತನಾಡಿದ ಅವರು, ಅಪಘಾತ ವಲಯ ಮತ್ತು ಬ್ಲಾಕ್‌ ಸ್ಪಾಟ್‌ ಗುರುತಿಸಿ ಕೈಕಟ್ಟಿ ಕುಳಿತರೆ ನಿಮ ಜವಾಬ್ದಾರಿ ಮುಗಿಯಿತೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 34,916 ಅಪಘಾತಗಳು ಸಂಭವಿಸಿದ್ದು, 9943 ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿರುವ ರಸ್ತೆ ಸುರಕ್ಷಾ ಸಮಿತಿಗಳು ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ತಡೆಯಲು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ಕಂದಾಯ, ಪೊಲೀಸ್‌‍, ಸಾರಿಗೆ, ನಗರ ಪಾಲಿಕೆ ಎಲ್ಲರೂ ಸಮನ್ವಯದಿಂದ ಕಾರ್ಯ ನಿರ್ವಹಿಸಿದರೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯ. ರಸ್ತೆ ಸುರಕ್ಷತಾ ಸಪ್ತಾಹಗಳು ಕಾಟಾಚಾರಕ್ಕೆ ನಡೆಯಬಾರದು. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಹಲವು ಅಪಘಾತಗಳನ್ನು ತಡೆಯಬಹುದಾಗಿದೆ. ನಮ ನಿರ್ಲಕ್ಷ್ಯದಿಂದ ಜನರ ಪ್ರಾಣಹಾನಿ ಉಂಟಾಗುವುದನ್ನು ಸಹಿಸಲು ಸಾಧ್ಯವಿಲ್ಲ. ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಹೆದ್ದಾರಿಗಳಲ್ಲಿ ಅಂಬ್ಯುಲೆನ್‌್ಸ ವ್ಯವಸ್ಥೆ, ಟ್ರಾಮಾ ಸೆಂಟರ್‌ ನೆಟ್ವರ್ಕ್‌ ಮಾಡಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!