ಉದಯವಾಹಿನಿ, ಬೆಂಗಳೂರು: ಆರ್ಯವೈಶ್ಯ ಸಮುದಾಯ ವ್ಯಾಪಾರ ವಹಿವಾಟಿಗೆ ಮಾತ್ರ ಸೀಮಿತವಾಗಬಾರದು. ವೇದಾದ್ಯಯನ ಮಾಡಿ ಸಂಸ್ಕತ ಪಂಡಿತರಾಗಿ ಹೊರ ಹೊಮ್ಮಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಗುಂಡಯ್ಯ ಶೆಟ್ಟಿ ಹೇಳಿದ್ದಾರೆ.
ಶ್ರೀ ವಾಸವಿ ವೇದ ನಿಧಿ ಟ್ರಸ್ಟ್ ೪೫ ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದು, ಟ್ರಸ್ಟ್ ನ ಸಂಸ್ಥಾಪಕರಾದ ಅವರು, ಸಂಘದಲ್ಲಿ ಬಡ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಉಚಿತ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್ಯವೈಶ್ಯ ಸಮುದಾಯ ಎಲ್ಲಾ ರೀತಿಯ ಪೂಜೆ, ಕಾರ್ಯಕ್ರಮಗಳನ್ನು ನಡೆಸುವ ಜೊತೆಗೆ ಎಲ್ಲಾ ವಲಯಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಟ್ರಸ್ಟ್ ನ ಅಧ್ಯಕ್ಷರಾದ ಟ್ರಸ್ಟ್ ನ ಅಧ್ಯಕ್ಷ ಡಾ. ವಿಷ್ಣು ಭರತ್ ಅಲಂಪಲ್ಲಿ, ಪ್ರಧಾನ ಕಾರ್ಯದರ್ಶಿ ಆರ್. ಪಿ. ರವಿಶಂಕರ್ ಮಾತನಾಡಿ, ಕಳೆದ ೧೯೭೯ರಲ್ಲಿ ಪ್ರಾರಂಭಗೊಂಡ ಶ್ರೀ ವಾಸವಿ ವೇದ ನಿಧಿ ಟ್ರಸ್ಟ್ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ೭೫ ಮಂದಿ ಬಡ ಅರ್ಹ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವಾಗುತ್ತಿದೆ. ವೈದಿಕ ಶಿಕ್ಷಣ, ಸಂಸ್ಕೃತ ಸಾಹಿತ್ಯ ಕಲಿಕೆಗಾಗಿ ಇಡೀ ದಕ್ಷಿಣ ಭಾರದಾದ್ಯಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಜಯನಗರ ಪೂರ್ವ ೧ಬ್ಲಾಕ್ ನಲ್ಲಿ ಸುಸಜ್ಜಿತ ವಸತಿ ನಿಲಯಗಳಲ್ಲಿ ಉಚಿತ ಆಹಾರ, ಸಮಗ್ರ ಶಿಕ್ಷಣ, ಶೈಕ್ಷಣಿಕ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!