ಉದಯವಾಹಿನಿ, ಬೆಂಗಳೂರು: ಕಾರವಾರದ ಅಂಕೋಲಾ ತಾಲ್ಲೂಕಿನ ಶಿರೂರು ಬಳಿಯ ಮಂಗಳೂರು- ಗೋವಾ ಹೆದ್ದಾರಿಯಲ್ಲಿ ದಿಢೀರ್‌ ಮಣ್ಣು ಕುಸಿದು ಗಂಗಾವಳಿ ನದಿಗೆ ಕೊಚ್ಚಿಕೊಂಡು ಹೋದವರ ಪೈಕಿ ಇಂದು ಬೆಳಗ್ಗೆ ಅಂಕಿತಾ(5) ಹಾಗೂ ಟ್ಯಾಂಕರ್‌ ಚಾಲಕ ಮುರುಗನ್‌ ಮೃತದೇಹ ಪತ್ತೆಯಾಗಿವೆ.ಗೋಕರ್ಣ ಸಮುದ್ರದ ದಡದಲ್ಲಿ ಟ್ಯಾಂಕರ್‌ ಚಾಲಕ ಮುರುಗನ್‌ ಹಾಗೂ ಅಂಕಿತಾ ಮೃತದೇಹ ತೇಲುತ್ತಿದ್ದುದು ಕಂಡು ಅಗ್ನಿಶಾಮಕ ದಳ ಇಂದು ಶವಗಳನ್ನು ಮೇಲೆತ್ತಿದ್ದಾರೆ. ಅಂದಿನ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಆರು ಶವಗಳು ಪತ್ತೆಯಾಗಿವೆ.
ಈ ಭಾಗದಲ್ಲಿ ಕಳೆದೊಂದು ವಾರದಿಂದ ದಾರಾಕಾರ ಮಳೆ ಸುರಿಯುತ್ತಿದ್ದು, ಮನೆಗೆ ಹೊಂದಿಕಂಡಂತೆ ಶಿರೂರಿನ ಲಕ್ಷ್ಮಣ ನಾಯ್ಕ್ ಕುಟುಂಬ ಚಹಾ ಅಂಗಡಿ ಹಾಗೂ ಹೊಟೇಲ್‌ ನಡೆಸುತ್ತಾ ಜೀವನ ನಡೆಸುತ್ತಿದ್ದರು.

ಮಂಗಳವಾರ ಬೆಳಗ್ಗೆ ಏಕಾಏಕಿ ಗುಡ್ಡದ ಮಣ್ಣು ಕುಸಿಯುತ್ತಿದ್ದಂತೆ ಈ ಭಾಗದ ಜನರು ಆ ಭಾಗದಿಂದ ಓಡಿ ಪ್ರಾಣ ಉಳಿಸಿಕೊಂಡರೆ, ನೋಡ ನೋಡುತ್ತಿದ್ದಂತೆ ಲಕ್ಷ್ಮಣನಾಯ್‌್ಕ ಅವರ ಮನೆ- ಹೊಟೇಲ್‌ ಮೇಲೆ ಮಣ್ಣು ಕುಸಿದಿದೆ.ಆ ಸಂದರ್ಭದಲ್ಲಿ ಟ್ಯಾಂಕರ್‌ಗಳನ್ನು ನಿಲ್ಲಿಸಿ ಚಹಾ ಸೇವಿಸುತ್ತಿದ್ದ ಚಾಲಕರು ಹಾಗೂ ಲಕ್ಷ್ಮಣ್‌ನಾಯ್ಕ್ ಅವರ ಕುಟುಂಬದ ಐದು ಮಂದಿ ಸೇರಿ ಹಲವು ಮಂದಿ ನಾಪತ್ತೆಯಾಗಿದ್ದರು.ತದನಂತರದಲ್ಲಿ ಅವರಿಗಾಗಿ ಹುಡುಕಾಟ ನಡೆಸಿದಾಗ ಪಕ್ಕದಲ್ಲೇ ಹರಿಯುತ್ತಿದ್ದ ಗಂಗಾವಳಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಬಗ್ಗೆ ಶಂಕೆ ವ್ಯಕ್ತಪಡಿಸಿ ಎಸ್‌‍ಡಿಆರ್‌ಎಫ್‌ ಅಗ್ನಿ ಶಾಮಕದಳ ಹಾಗೂ ಪೊಲೀಸರು ಹುಡುಕಾಟ ನಡೆಸಿದಾಗ ಗೋಕರ್ಣ ಸಮುದ್ರದ ಬ್ರಿಡ್‌್ಜ ಬಳಿ ಒಂದೇ ಕುಟುಂಬದ ನಾಲ್ವರ ಮೃತದೇಹಗಳನ್ನು ಹೊರ ತೆಗೆಯಲಾಗಿತ್ತು. ಇಂದು ಅದೇ ಕುಟುಂಬಕ್ಕೆ ಸೇರಿದ ಅಂಕಿತಾ ಹಾಗೂ ಶವ ಹಾಗೂ ಟ್ಯಾಂಕರ್‌ ಚಾಲಕ ಮುರುಗನ್‌ ಮೃತದೇಹ ಪತ್ತೆಯಾಗಿವೆ.

Leave a Reply

Your email address will not be published. Required fields are marked *

error: Content is protected !!