ಉದಯವಾಹಿನಿ, ಬೆಂಗಳೂರು: ಸಚಿವ ಸ್ಥಾನದ ಬಗ್ಗೆ ಈವರೆಗೂ ಯಾವುದೇ ತೀರ್ಮಾನ ಮಾಡದಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಳಿ ಅವರ ಆಪ್ತರು ಯಾರು ಸುಳಿದಿಲ್ಲ. ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. 8 ಮಂದಿಯನ್ನು ಬಿಟ್ಟು ಸಚಿವರು ಯಾರು ಎಂಬುದನ್ನು ಇನ್ನು ತೀರ್ಮಾನವಾಗಿಲ್ಲ.ಈ ಹಿನ್ನೆಲೆಯಲ್ಲಿ ಸಿದ್ದು ಮೇಲೆ ಅಸಮಾಧಾನಗೊಂಡಿರುವಂತೆ ಕಾಣುತ್ತದೆ.ಸಿದ್ದರಾಮಯ್ಯ ಮನೆ ಬಳಿ ಆಪ್ತ ಶಾಸಕ ಮಹಾದೇವಪ್ಪ, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಭೈರತಿ ಸುರೇಶ್, ಬಸವರಾಜ್ ರಾಯರೆಡ್ಡಿ, ಶಿವರಾಜ್ ತಂಗಡಗಿ, ತುಕರಾಮ್, ಸಂತೋಷ್ ಲಾಡ್, ರಾಘವೇಂದ್ರ ಹಿಟ್ನಾಳ್, ರಿಜ್ವಾನ್ ಅರ್ಷದ್, ನಾರಾಯಣಸ್ವಾಮಿ, ಅಶೋಕ್ ಪಟ್ಟಣ, ಯುಟಿ ಖಾದರ್, ಪ್ರಕಾಶ್ ರಾಥೋಡ್ ಹಾಗೂ ಕೆ.ಎನ್. ರಾಜಣ್ಣ ಸೇರಿ ಹಲವರು ಸಿದ್ದರಾಮಯ್ಯರಿಂದ ದೂರ ಉಳಿದಿದ್ದಾರೆ.
