ಉದಯವಾಹಿನಿ , ಕಾರವಾರ: ಖ್ಯಾತ ಜ್ಯೋತಿಷಿಯೊಂದಿಗೆ ಮಹಿಳೆ ಅನೈತಿಕ ಸಂಬಂಧ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರ ಕೊಲೆಯಾಗಿ, ಇಬ್ಬರು ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಮೂಲದ ಜ್ಯೋತಿಷಿ ಕಮಲಾಕರ ಭಟ್ ಗುರೂಜಿ ಸೇರಿ 7 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ವಸಂತ್ ನಾಯ್ಕ (41) ಮೃತ ವ್ಯಕ್ತಿಯಾಗಿದ್ದು, ಮಹೇಶ್ ಹಾಗೂ ಕುಮಾರ್‌ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಚಿತ್ರಾ ಎಂಬ ಮಹಿಳೆ ಗಂಡನಿಂದ ಬೇರ್ಪಟ್ಟು ಶಿವಮೊಗ್ಗದದಲ್ಲಿ ಜ್ಯೋತಿಷಿ ಕಮಲಾಕಾರ ಭಟ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಈಕೆಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ತಾಯಿ ಸುಚಿತ್ರಾಗೆ ಜ್ಯೋತಿಷಿ ಕಮಲಾಕರ್ ಭಟ್ ಜತೆ ಅಕ್ರಮ ಸಂಬಂಧವಿರುವ ವಿಚಾರ ಮಗಳಿಗೆ ಗೊತ್ತಾಗಿತ್ತು. ಈ ವಿಚಾರವನ್ನು ತಂದೆ ಮಹೇಶ್‌ ನಾಯ್ಕ್‌ಗೆ ತಿಳಿಸಿದ್ದ ಮಗಳು, ಬಳಿಕ ಸಿದ್ದಾಪುರದ ಅವರಗುಪ್ಪ ಗ್ರಾಮದ ಚಿಕ್ಕಪ್ಪ ವಸಂತ್ ನಾಯ್ಕ್‌ ಮನೆಗೆ ಬಂದಿದ್ದಳು.

ಮಗಳನ್ನು ಹುಡುಕಿಕೊಂಡು ಸುಚಿತ್ರಾ, ಜ್ಯೋತಿಷಿ ಕಮಲಾಕರ್ ಭಟ್ ವಾಹನದಲ್ಲಿ ತಂದೆ ಜತೆ ಕೆಲವು ಯುವಕರೊಂದಿಗೆ ವಸಂತ್ ನಾಯ್ಕ್‌ ಅವರ ಮನೆಗೆ ಬಂದಿದ್ದು, ಆಕೆಯ ಪತಿ ಮಹೇಶ್ ಕೂಡ ಇದ್ದರು. ಈ ವೇಳೆ ಸುಚಿತ್ರಾ ಮತ್ತು ಪತಿ ಮಹೇಶ್ ನಡುವೆ ವಾಗ್ವಾದ ನಡೆದಿದೆ.

ಈ ವೇಳೆ ಗಲಾಟೆ ತಾರಕಕ್ಕೆ ಹೋಗಿ ಸುಚಿತ್ರ ಜತೆ ಬಂದಿದ್ದ ಯುವಕರು, ಗಲಾಟೆ ಬಿಡಿಸಲು ಮಧ್ಯ ಪ್ರವೇಶಿಸಿದ್ದ ವಸಂತ್‌ಗೆ ಚಾಕು ಇರಿದಿದ್ದಲ್ಲದೇ, ಸುಚಿತ್ರ ಪತಿ ಮಹೇಶ್ ಹಾಗೂ ಪಕ್ಕದ ಮನೆಯ ಕುಮಾರ್ ಎಂಬುವವರಿಗೂ ಚಾಕು ಇರಿದಿದ್ದಾರೆ.

Leave a Reply

Your email address will not be published. Required fields are marked *

error: Content is protected !!