ಉದಯವಾಹಿನಿ, ಕೊಳ್ಳೇಗಾಲ: ತಾಲ್ಲೂಕಿನ ಜಾಗೇರಿ ಗ್ರಾಮದ ಚೆನ್ನಿಪುರ ದೊಡ್ಡಿಯ ಬಾಳೆ ತೋಟದಲ್ಲಿ ಕಾಣಿಸಿಕೊಂಡ ಭಾರಿ ಗಾತ್ರದ ಹೆಬ್ಬಾವನ್ನು ಹಿಡಿದು ಅರಣ್ಯಕ್ಕೆ ಬಿಡಲಾಯಿತು.ಗ್ರಾಮದ ಸೇಂದಿಲ್ ಎಂಬುವರ ತೋಟದಲ್ಲಿ ಬುಧವಾರ ಬೆಳಿಗ್ಗೆ 13 ಅಡಿಗಿಂತ ಹೆಚ್ಚಿನ ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಮಾಲೀಕರು ಕೂಡಲೇ ಉರಗ ಪ್ರೇಮಿ ಸ್ನೇಕ್ ಬಾಬು ಅವರಿಗೆ ಮಾಹಿತಿ ನೀಡಿದರು.ಸ್ಥಳಕ್ಕೆ ಬಂದ ಸ್ನೇಕ್ ಬಾಬು ಹೆಬ್ಬಾವನ್ನು ಹಿಡಿದು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಗುಂಡಲ್ ಅರಣ್ಯ ಪ್ರದೇಶಕ್ಕೆ ಬಿಟ್ಟರು.

Leave a Reply

Your email address will not be published. Required fields are marked *

error: Content is protected !!