ಉದಯವಾಹಿನಿ, ಬೆಂಗಳೂರು: ಬಸ್ ನಿಲ್ಲಿಸಿಲ್ಲ ಎಂದು ಕಲ್ಲು ತೂರಿದ ಸರಕು ಸಾಗಾಣಿಕೆ ವಾಹನದ ಚಾಲಕನನ್ನು ಎಸ್‍ಜೆ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ತಮಿಳುನಾಡಿನ ಮಹಾರಾಜ ಬಂಧಿತ ಆರೋಪಿ. ಈತ ನಗರದ ಸರಕು ಸಾಗಾಣಿಕೆ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡು ವಾಸವಾಗಿದ್ದಾನೆ.
ರಾತ್ರಿ 12.30ರ ಸಂದರ್ಭದಲ್ಲಿ ಮಹಾರಾಜ ತಮಿಳುನಾಡಿಗೆ ಹೋಗಲು ಟೌನ್‍ಹಾಲ್ ಮುಂಭಾಗ ನಿಂತಿದ್ದಾಗ ತಿರುವಣ್ಣಮಲೈಗೆ ಹೋಗುವ ಬಸ್ ಬಂದಿದೆ. ಅದರಲ್ಲಿ ಪ್ರಯಾಣಿಕರು ಹೆಚ್ಚಾಗಿ ಇದುದ್ದರಿಂದ ಚಾಲಕ ಅಲ್ಲಿ ಬಸ್ ನಿಲ್ಲಿಸದೆ ಹೋಗುತ್ತಿದ್ದಾನೆ. ಆಗ ಕೋಪಗೊಂಡ ಈತ ರಸ್ತೆಯಲ್ಲಿ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಬಸ್‍ನ ಹಿಂಭಾಗದ ಗ್ಲಾಸ್‍ಗೆ ಹೊಡೆದ ಪರಿಣಾಮ ಗಾಜು ಪುಡಿ ಪುಡಿಯಾಗಿದೆ.
ತಕ್ಷಣ ಚಾಲಕ ಬಸ್ ನಿಲ್ಲಿಸಿದ. ನಿರ್ವಾಹಕ ಹಾಗೂ ಚಾಲಕ ಇಬ್ಬರು ಸೇರಿ ಈತನನ್ನು ಹಿಡಿದು ಎಸ್.ಜೆ ಪಾರ್ಕ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!