ಉದಯವಾಹಿನಿ, ಹುಬ್ಬಳ್ಳಿ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಧಾರವಾಡ-ಹುಬ್ಬಳ್ಳಿ ಇಂದಿರಾ ಕ್ಯಾಂಟಿನ್ಗಳಲ್ಲಿ ಹೋಳಿಗೆ ವಿತರಣೆ ಮಾಡಲಾಯಿತು.ಡಾ. ಮಯೂರ ಮೋರೆ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಧಾರವಾಡ ಮಿನಿವಿಧಾನಸೌಧ ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್ನಲ್ಲಿ ಊಟದ ಜೊತೆಗೆ ಹೋಳಿಗೆ ವಿತರಣೆ ಮಾಡಲಾಯಿತು.ಧಾರವಾಡ-ಹುಬ್ಬಳ್ಳಿ ದಕ್ಷಿಣ ಕನ್ನಡ, ಬಾಗಲಕೋಟೆ ಸೇರಿ ಮೂರು ಜಿಲ್ಲೆಗಳ 17 ಕ್ಯಾಂಟಿನ್ಗಳಲ್ಲಿ ಒಟ್ಟು 9 ಸಾವಿರ ಹೊಳಿಗೆ ವಿತರಣೆ ಮಾಡಲಾಗಿದೆ.
