ಉದಯವಾಹಿನಿ, ಬೆಂಗಳೂರು: ಚುನಾವಣೆಗು ಮುನ್ನವೇ ಕಾಂಗ್ರೆಸ್​, ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿತ್ತು. ಕಾಂಗ್ರೆಸ್​ನ ಭರ್ಜರಿ​ ಗೆಲುವಿನಲ್ಲಿ ಈ ಗ್ಯಾರಂಟಿಗಳು ಕೂಡ ಪ್ರಮುಖ ಪಾತ್ರವಹಿಸಿವೆ. ಇದೀಗ ಸರ್ಕಾರ ರಚನೆಗೆ ಮುಂದಾಗಿರುವ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಯಾವ ರೀತಿ ಈಡೇರಿಸುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಇದರ ನಡುವೆಯೇ ಇನ್ನೊಂದು ಗ್ಯಾರಂಟಿಯನ್ನು ಕಾಂಗ್ರೆಸ್​ ಘೋಷಣೆ ಮಾಡಿದೆ.ಆದರೆ, ಈ ಬಾರಿ ಕಾಂಗ್ರೆಸ್​ ಪಕ್ಷದಿಂದ ಗ್ಯಾರಂಟಿ ಘೋಷಣೆಯಾಗಿಲ್ಲ. ಬದಲಾಗಿ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪ್ರಿಯಾಂಕ ಖರ್ಗೆ ಅವರಿಂದ 6ನೇ ಗ್ಯಾರಂಟಿ ಘೋಷಣೆಯಾಗಿದೆ.ಇಂದು ನಿಯೋಜಿತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಹಾಗೂ ಎಂಟು ಸಚಿವ ಪದಗ್ರಹಣ ಸಮಾರಂಭ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ರಿಯಾಂಕ ಖರ್ಗೆ ಅವರಿಗೂ ಸಚಿವ ಸ್ಥಾನ ದೊರೆತಿದೆ. ಹೀಗಾಗಿ ಪ್ರಮಾಣವಚನ ಸ್ವೀಕರಿಸಲು ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದು, ಅದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಆರನೇ ಗ್ಯಾರಂಟಿ ಘೋಷಣೆ ಮಾಡಿದರು.
ಯಾವುದು ಆ ಗ್ಯಾರಂಟಿ ಎಂದು ನೋಡುವುದಾದರೆ, ಪಿಎಸ್​ಐ ಹಾಗೂ ಬಿಟ್​ಕಾಯಿನ್ ಹಗರಣಗಳಿಗೆ ತಾರ್ಕಿಕ ಅಂತ್ಯವನ್ನು ಕಾಂಗ್ರೆಸ್​ ನೀಡಲಿದೆಯಂತೆ. ಇದು ನನ್ನ ಆರನೇ ಭರವಸೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಬಿಜೆಪಿ ಸರ್ಕಾರದ ಹಗರಣಗಳ ಆರೋಪಿಗಳಿಗೆ ಶಿಕ್ಷೆ ನೀಡಿಸಲಾಗುವುದು. ಎರಡು ಪ್ರಕರಣಗಳನ್ನು ಲಾಜಿಕ್ ಎಂಡ್​ಗೆ ತೆಗೆದುಕೊಂಡು ಹೋಗಲಾಗುವುದು ಎಂದು ಪ್ರಿಯಾಂಕ ಖರ್ಗೆ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!