ಉದಯವಾಹಿನಿ, ಬೀದರ: ಬೀದರ್ ಮೂಲದ ಯೋಧರೊಬ್ಬರು ಸಿಕ್ಕಿಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.ಬೀದರ್ ನ ಕಮಲನಗರ ತಾಲೂಕಿನ ಕೋರಿಯಾಳ ಗ್ರಾಮದ ಹವಲ್ದಾರ್ ಅನೀಲ್ ಕುಮಾರ್ ನವಾಡೆ (40) ಮೃತ ಯೋಧ. ಯೋಧ ಅನೀಲ್ ಕಳೆದ 20 ವರ್ಷಗಳಿಂದ ಸೈನ್ಯದಲ್ಲಿ ಸೇವೆ ಸಲ್ಲಿಸುತಿದ್ದರು.
ಸಿಕ್ಕಿಂ ಗಡಿ ಭಾಗದಲ್ಲಿ ಹಿಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹಿಮಪಾತವಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.
ಯೋಧ ಅನೀಲ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯೋಧನ ಪಾರ್ಥೀವ ಶರೀರ ಜುಲೈ 28ರಂದು ಸ್ವಗ್ರಾಮಕ್ಕೆ ಬರುವ ಸಾಧ್ಯತೆ ಇದೆ. ಪತ್ನಿ, ಮಗ, ಮಗಳು ಹಾಗೂ ತಂದೆ-ತಾಯಿ, ನಾಲ್ವರು ಸಹೋದರರನ್ನು ಅನೀಲ್ ಅಗಲಿದ್ದಾರೆ.
