ಉದಯವಾಹಿನಿ, ಬೆಂಗಳೂರು: ಆರ್ಸಿಬಿ ಪಾಲಿಗೆ ನಿರ್ಣಾಯಕ ಎನಿಸಿಕೊಂಡಿರುವ ಇಂದಿನ ಪಂದ್ಯಕ್ಕೆ ವರುಣ ದೇವ ಅಡ್ಡಿ ಪಡಿಸಿದ್ದಾನೆ! ಬೆಂಗಳೂರಿನ ವಿವಿಧೆಡೆ ಸಂಜೆ ಮೂರು ಗಂಟೆಯ ಬಳಿಕ ಭಾರೀ ಗಾಳಿ-ಮಳೆಯಾಗುತ್ತಿದ್ದು, ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ಇದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ತಂಡದ ನಡುವಿನ ಪಂದ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಪಂದ್ಯ ನಡೆಯಬಹುದು!
ಶನಿವಾರ ಸಂಜೆಯೂ ಚಿನ್ನಸ್ವಾಮಿ ಕ್ರೀಡಾಂಗಣ ವ್ಯಾಪ್ತಿಯಲ್ಲಿ ಮಳೆಯಾಗಿದ್ದು, ಎರಡೂ ತಂಡಗಳ ಆಟಗಾರರಿಗೆ ಅಭ್ಯಾಸಕ್ಕೆ ಅಡಚಣೆ ಉಂಟಾಗಿತ್ತು. ಇಂದಿನ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದ್ದರೂ, ಪಂದ್ಯ ನಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಕಾರಣ ನೀರು ಇಂಗಿಸುವ ಸಬ್ಏರ್ ವ್ಯವಸ್ಥೆ.
