ಉದಯವಾಹಿನಿ, ಬೆಂಗಳೂರು: ಕೌಟುಂಬಿಕ ಕಲಹದಿಂದ ತವರು ಮನೆ ಸೇರಿದ್ದ ಪತ್ನಿಯ ಧೋರಣೆಯಿಂದ ಬೇಸತ್ತಿದ್ದ ಪಾಪಿ ಪತಿಯೊಬ್ಬ ಅಮಾಯಕನಂತೆ ಅತ್ತೆ ಮನೆಗೆ ಬಂದು ಮಡದಿಗೆ ಮನಬಂದಂತೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ತಾನು ಬಯ್ಯುತ್ತಿರುವುದನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡು ಫೇಸ್‌‍ಬುಕ್‌ನಲ್ಲಿ ಹಾಕಿ ಪರಾರಿಯಾಗಿರುವ ಘಟನೆ ಇಂದು ಬೆಳಿಗ್ಗೆ ಚಾಮರಾಜಪೇಟೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪತಿಯಿಂದಲೇ ಹತ್ಯೆಯಾದ ಮಹಿಳೆಯನ್ನು ಸೈಯದ್‌ ಫಾಜೀಲ್‌ ಫಾತೀಮಾ (34) ಎಂದು ಗುರುತಿಸಲಾಗಿದೆ.ಫಾತೀಮಾ 9 ವರ್ಷಗಳ ಹಿಂದೆ ಸಿದ್ದಾಪುರದ ತಬರೇಜ್‌ ಪಾಷಾ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಕೌಟುಂಬಿಕ ಕಲಹದಿಂದಾಗಿ ಆಕೆ ಕೆಲ ದಿನಗಳ ಹಿಂದೆ ಪತಿಯನ್ನು ತೊರೆದು ತಾಯಿ ಮನೆ ಸೇರಿಕೊಂಡಿದ್ದರು.

ಚಾಮರಾಜಪೇಟೆಯ ಎಂಡಿ ಬ್ಲಾಕ್‌ನಲ್ಲಿದ್ದ ತಾಯಿ ಮನೆಯಲ್ಲಿದ್ದ ಫಾತೀಮಾ ಅವರ ಮಕ್ಕಳು ಅಲ್ಲಿಂದಲೇ ಶಾಲೆಗೆ ಹೋಗಿ ಬರುತ್ತಿದ್ದರು.ಪತ್ನಿ ದೂರ ಆದಾಗಿನಿಂದ ಹುಚ್ಚನಂತಾಗಿದ್ದ ತಬರೇಜ್‌ ಫಾತೀಮಾಳನ್ನು ಮತ್ತೆ ಮನೆಗೆ ವಾಪಸ್ಸಾಗುವಂತೆ ಪರಿ ಪರಿಯಾಗಿ ಬೇಡಿಕೊಂಡಿದ್ದರೂ ಆಕೆ ಜಪ್ಪಯ್ಯ ಎಂದಿರಲಿಲ್ಲ. ಪತ್ನಿಯ ಈ ವರ್ತನೆ ಆತನನ್ನು ಮೃಗವನ್ನಾಗಿ ಪರಿವರ್ತಿಸಿತ್ತು ಎನ್ನಲಾಗಿದೆ. ಹೀಗಾಗಿಯೇ ಆತ ತನ್ನ ಮಡದಿಯ ಹತ್ಯೆಗೆ ಮುಹೂರ್ತ ಫಿಕ್‌್ಸ ಮಾಡಿಕೊಂಡಿದ್ದ. ಪತ್ನಿಯನ್ನು ಕೊಲೆ ಮಾಡಲೆ ಬೇಕು ಎಂದುಕೊಂಡೇ ಇಂದು ಬೆಳಗ್ಗೆ ಬಂದಿದ್ದ ತಬರೇಜ್‌ ತನ್ನ ಇಬ್ಬರು ಮಕ್ಕಳು ಶಾಲೆಗೆ ಹೋಗುವವರೆಗೆ ಕಾದು ಕುಳಿತು ಮಕ್ಕಳು ಶಾಲೆಗೆ ಹೋದ ನಂತರ ತಾನು ತಂದಿದ್ದ ಬೈಕ್‌ಅನ್ನು ಅತ್ತೆ ಮನೆ ಮುಂಭಾಗ ಪಾರ್ಕ್‌ ಮಾಡಿ ಏನೂ ಅರಿಯದ ಮುಗ್ದನಂತೆ ಮನೆ ಪ್ರವೇಶಿಸಿದ್ದ.

Leave a Reply

Your email address will not be published. Required fields are marked *

error: Content is protected !!