ಉದಯವಾಹಿನಿ, ಬೆಂಗಳೂರು: `ವಿಪಕ್ಷ ನಾಯಕ ತಲೆ ಹಿಡುಕ’ ಎಂದಿದ್ದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ಮಾತಿಗೆ ಇಂದಿನ ಕಲಾಪವೇ ಬಲಿಯಾಯ್ತು. ಜನವರಿ 23 ರಂದು ಕಲಾಪದಲ್ಲಿ ಮಾತನಾಡುವಾಗ, ಬಿಜೆಪಿ- RSS ವಿರುದ್ಧ ವಿವಾದಾತ್ಮಕ ಮಾತುಗಳನ್ನ ಬಿ.ಕೆ ಹರಿಪ್ರಸಾದ್ ಆಡಿದ್ರು. ಬಿಜೆಪಿ ಅವರು, RSS ಅವರು ಯಾವ ಮಹಿಳೆಯರನ್ನೂ ಬಿಟ್ಟಿಲ್ಲ, ಪೋಕ್ಸೋ ಕೇಸ್ ನಲ್ಲಿ ಇರೋರು, ಲಫಾಂಗಗಳು ಅಂತ ವಿವಾದಾತ್ಮಕ ಮಾತು ಆಡಿದ್ರು. ಇದೇ ವೇಳೆ ಮಾತನಾಡುವಾಗ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೀನು ತಲೆ ಹಿಡುಕ ಎಂದಿದ್ದರು. ಇಂದೂ ಕೂಡ ರಾಜ್ಯಪಾಲರ ವಿಚಾರವಾಗಿ ಚರ್ಚೆ ಆಗೋವಾಗ ರಾಜ್ಯಪಾಲರಿಗೆ ಕೈ ‌ತೋರಿಸದೇ ಕಾಲು ತೋರಿಸೋಕೆ ಆಗುತ್ತಾ ಅಂತ ವಿವಾದದ ಮಾತಾಡಿದ್ರು.

ಜನವರಿ 23, 28, 29 ರಂದು ವಿವಾದದ ಮಾತಾಡಿದ್ದ ಹರಿಪ್ರಸಾದ್ ಅವರನ್ನ ಅಮಾನತು ‌ಮಾಡುವಂತೆ ಬಿಜೆಪಿಯಿಂದ ಸಭಾಪತಿಗಳಿಗೆ ದೂರು ನೀಡಿದ್ರು. ಕಾನೂನು ಸಚಿವರ ಅಭಿಪ್ರಾಯ ಪಡೆದಿದ್ದ ಸಭಾಪತಿ ಪಡೆದರು. ಮತ್ತೆ ‌ಕಲಾಪ ಪ್ರಾರಂಭವಾದಾಗ ಹರಿಪ್ರಸಾದ್ ಆಡಿದ್ದ ಮಾತುಗಳನ್ನ ಉಲ್ಲೇಖ ‌ಮಾಡಿದ ಸಭಾಪತಿಗಳು ಹರಿಪ್ರಸಾದ್ ಗೆ ಈ ಬಗ್ಗೆ ಅಭಿಪ್ರಾಯ ‌ಕೇಳಿದ್ರು. ಬಿಜೆಪಿ- RSS ಅವರು ಯಾವ ಮಹಿಳೆಯನ್ನು ಬಿಟ್ಟಿಲ್ಲ, ಫೋಕ್ಸೋ ಕೇಸ್ ‌ಇರೋದು ಅಂತ ಹೇಳಿದ್ದ ಪದ ವಾಪಸ್ ಪಡೆಯುತ್ತೇನೆ. ಯಾರಿಗಾದ್ರು ನೋವಾಗಿದ್ದರೆ, ವಿಷಾದ ವ್ಯಕ್ತಪಡಿಸುತ್ತೇನೆ ಅಂತ ಹರಿಪ್ರಸಾದ್ ತಿಳಿಸಿದರು. ಆದರೆ ವಿಪಕ್ಷ ನಾಯಕ ತಲೆ ಹಿಡುಕ ಅನ್ನೋ ಪದದ ಬಗ್ಗೆ ಮಾತಾಡಲಿಲ್ಲ. ಬಳಿಕ ಹರಿಪ್ರಸಾದ್ ಮಾತಾಡಿದ್ದ ವಿವಾದದ ಪದಗಳನ್ನು ಕಡತದಿಂದ ಸಭಾಪತಿಗಳು ತೆಗೆದು ಹಾಕಿದ್ರು. ಈ ವೇಳೆ ಮಾತಾಡಿದ ಸಭಾಪತಿಗಳು, ದೊಡ್ಡ ಮನಸು ಮಾಡಿ. ಸದನದಲ್ಲಿ ಇಂತಹ ಮಾತು ಆಡೋದು ಶೋಭೆ ತರೊಲ್ಲ. ನೀವು ಸಿನಿಯರ್ ಇದ್ದೀರಾ. ದೊಡ್ಡ ಮನಸು ಮಾಡಿ ವಿಷಾದ ವ್ಯಕ್ತಪಡಿಸಿ ಎಂದರು.

Leave a Reply

Your email address will not be published. Required fields are marked *

error: Content is protected !!